ಇಂಡಕ್ಷನ್ ಸ್ಟೌವ್ನಲ್ಲಿ ಶಾರ್ಟ್ ಸರ್ಕ್ಯೂಟ್ -ಅಡುಗೆ ಮಾಡುವಾಗ ಅವಘಡ-ಮಹಿಳೆ ಸ್ಥಿತಿ ಗಂಭೀರ

Spread the love

 

ಪ್ರಜಾಪಥ ವಾರ್ತೆ

ಬೆಂಗಳೂರು: ಕರೆಂಟ್ ಇಂಡಕ್ಷನ್ ಸ್ಟೌವ್​ನಲ್ಲಿ ಅಡುಗೆ ಮಾಡುವಾಗ ಶಾರ್ಟ್ ಸರ್ಕ್ಯೂಟ್​ ಸಂಭವಿಸಿದ್ದು, ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ದಿನ ಬಳಕೆ ವಸ್ತು ಸೇರಿದಂತೆ ಇತರ ಸಾಮಗ್ರಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಇಂತಹ ಘಟನೆ ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ಸಂಭವಿಸಿದೆ. ಇಂಡಕ್ಷನ್ ಸ್ಟೌವ್​ನಲ್ಲಿ ಅಡುಗೆ ಮಾಡುತ್ತಿದ್ದ 40 ವರ್ಷದ ಮಹಿಳೆ ಶೋಭಾಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *