ಬೋರ್ ವೆಲ್ ಲಾರಿ ಹರಿದು ಗದಗ ಜಿಲ್ಲೆಯಲ್ಲಿ ರೈತ ಸಾವು
ಜಮೀನಿನಲ್ಲಿ ಬೋರ್ ವೆಲ್ ಕೊರೆಯವುದನ್ನು ನೋಡಲು ಹೋದಾಗ ಅವಘಡ
ಪ್ರಜಾಪಥ ವಾರ್ತೆ
ಡಂಬಳ: ಗ್ರಾಮದ ಹೊರವಲಯದ ರೈತರ ಜಮೀನಿನೊಂದರಲ್ಲಿ ಬೋರ್ ವೆಲ್ ಹಾಕುವ ವೇಳೆ ಲಾರಿ ಹಾಯಿದ್ದು ಸ್ಥಳದಲ್ಲೇ ರೈತನೋರ್ವ ಮೃತಪಟ್ಟಿರುವ ಘಟನೊಂದು ಶನಿವಾರ ಸಂಜೆ ವೇಳೆ ನಡೆದಿದೆ.
ಡಂಬಳ ಗ್ರಾಮದ ದಶರಥ ಸಿದ್ದಪ್ಪ ಪಾರಪ್ಪನವರ (42) ಮೃತ ದುರ್ದೈವಿ. ರೈತನೋರ್ವ ತಮ್ಮ ಜಮೀನಿನಲ್ಲಿ ಬೋರವೆಲ್ ಹಾಕಿಸುತ್ತಿರುವುದನ್ನು ನೋಡುವುಕ್ಕೆ ಹೋಗಿದ್ದ ಸಂದರ್ಭದಲ್ಲಿ ಬೋರವೆಲ್ ಲಾರಿ ಹರಿದಿದೆ. ಇದರಿಂದ ರೈತನು ಸ್ಥಳದಲ್ಲೇ ಸಾವುನ್ನಪಿದ್ದಾನೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.