ಶಿರಹಟ್ಟಿ ಬಳಿ ಸಿಡಿಲಿಗೆ ಇಬ್ಬರು ಬಲಿ
ದನಗಾಹಿ, ತೋಟದ ಮಾಲಿ ಸಾವು
ಪ್ರಜಾಪಥ ವಾರ್ತೆ
ಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ಘಟನೆ ಇಂದು ಸಂಜೆ ಸಂಭವಿಸಿದೆ.
ಮೃತರನ್ನು ಖಾನಾಪೂರದ ಮಾಬುಸಾಬ ದೊಡ್ಡಮನಿ (55) ಹಾಗೂ ದನ ಮೇಯಿಸಲು ಹೋಗಿದ್ದ ಹರಿಪೂರದ ನಿವಾಸಿ ಮುರಗೇಶ ಹೊಸಮನಿ (40) ಎಂದು ಗುರುತಿಸಲಾಗಿದೆ.
ಮದ್ಯಾಹ್ನ ಮೂರು ಗಂಟೆಯ ಸುಮಾರಿಗೆ ಗಾಳಿ, ಗುಡುಗು ಸಹಿತವಾಗಿ ಸುರಿದ ಭಾರಿ ಮಳೆಯಿಂದ ಹರಿಪೂರ ಹೊರವಲಯದಲ್ಲಿನ ಮಾವಿನ ತೋಟ ಕಾಯಲು ಹೋದಾಗ ಈ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಕಲಗೌಡ ಪಾಟೀಲ, ಸಿಪಿಐ ವಿಕಾಸ ಲಮಾಣಿ, ಪಿ ಎಸ್ ಐ ಪ್ರವೀಣ ಗಂಗೋಳ, ಕಂದಾಯ ನಿರೀಕ್ಷಕ ವiಹಾಂತೇಶ ಮುಗುದುಮ, ಗ್ರಾಮಲೆಖ್ಖಾಧಿಕಾರಿ ಪ್ರವವೀಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.