ಮಾ. 26,27ಕ್ಕೆ ಮಲ್ಲಸಮುದ್ರದ ರಾಜಾಬಾಗಸವಾರ ಉರುಸ್
ನಾಗಾವಿ ಕ್ರಾಸ್ ಬಳಿಯಿಂದಲೂ ದರ್ಗಾಕ್ಕೆ ನೇರ ರಸ್ತೆ ವ್ಯವಸ್ಥೆ
ಪ್ರಜಾಪಥ ವಾರ್ತೆ
ಗದಗ: ತಾಲ್ಲೂಕಿನ ಮಲ್ಲಸಮುದ್ರದ ಹೊರವಲಯದಲ್ಲಿ ಇರುವ ರಾಜಾ ಬಾಗಸವಾರ ದರ್ಗಾದ ಉರುಸ್ ಕಾರ್ಯಕ್ರಮ ಮಾ.25 ರಿಂದ ನಡೆಯಲಿವೆ. ಮಾ.25 ರಂದು ಶುಕ್ರವಾರ ರಾತ್ರಿ 8.30ಕ್ಕೆ ಗಂಧ ಜರುಗಲಿದೆ. ಮಾ.26 ರಂದು ಶನಿವಾರ ಹಾಗೂ ಮಾ.27 ರಂದು ರವಿವಾರ ಎರಡು ದಿನಗಳ ಕಾಲ ಉರುಸ್ ನಡೆಯಲಿದೆ. ಈ ಉರುಸ್ ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ಸೇರಿ ಜಿಲ್ಲೆ ಹಾಗೂ ಹೊರರಾಜ್ಯಗಳ ಭಕ್ತರು ಭಾಗವಹಿಸಲಿದ್ದಾರೆ.
ಲಕ್ಷ್ಮೇಶ್ವರ ಭಾಗದಿಂದ, ಗದಗದಿಂದ ಬರುವವರು ನಾಗಾವಿ ಕ್ರಾಸ್ ಬಳಿ ನೇರವಾಗಿ ದರ್ಗಾಕ್ಕೆ ಬರಲು ಸುರಕ್ಷಿತವಾದ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದಂತೆ ಮಲ್ಲಸಮುದ್ರದ ಒಳಭಾಗದಿಂದಲೂ ದರ್ಗಾಕ್ಕೆ ಬರಲು ಎಂದಿನ ರಸ್ತೆಯೂ ಇರಲಿದೆ.
ಮಕ್ತುಂ ಸಕ್ಕರೆ ನಿಷೇಧ: ಉರುಸ್ ವೇಳೆ ಮಕ್ತುಂ ಸಕ್ಕರೆ ಮಾರಾಟ ನಿಷೇಧಿಸಲಾಗಿದೆ. ಕಾರಣ ವ್ಯಾಪಾರಸ್ಥರು ಮಕ್ತುಂ ಸಕ್ಕರೆ ಬದಲಾಗಿ ‘ಜಾನಸಿ ಸಕ್ಕರೆ’ ಯನ್ನು ಪೂಜೆಗೆ ಬಳಸುವಂತೆ ದರ್ಗಾದ ಕಮೀಟಿಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.