ರಾಜಕೀಯ ಗುಂಗಲ್ಲಿ ಪ್ರಜ್ಞೆ ಕಳೆದುಕೊಂಡವರಂತೆ ಮಾತನಾಡಬೇಡಿ

Spread the love

ಸಚಿವ ಸಿ.ಸಿ. ಪಾಟೀಲರಿಗೆ ಶಿರಹಟ್ಟಿಯ ಜ.ಫಕ್ಕೀರದಿಂಗಾಲೇಶ್ವರರ ತಿರುಗೇಟು

 

ಪ್ರಜಾಪಥ ವಾರ್ತೆ

ಶಿರಹಟ್ಟಿ: ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿಸುವ ಹೇಳಿಕೆಗೆ ಆಕ್ಷೇಪಿಸಿ ದ್ದಕ್ಕೆ ಸಚಿವ ಸಿ.ಸಿ. ಪಾಟೀಲರು ದಿಂಗಾ ಲೇಶ್ವರ ಸ್ವಾಮೀಜಿ ಇತಿಹಾಸ ವನ್ನು ನಾವು ಬಲ್ಲೇವು ಅನ್ನುವ ಮಾತನ್ನು ಹೇಳಿದ್ದಾರೆ. ಮೊದಲು ಅವರು ರಾಜಕೀಯ ಗುಂಗಿ ನಲ್ಲಿ ಪ್ರಜ್ಞೆ ಕಳೆದುಕೊಂಡು ಮಾತ ನಾಡುವು ದನ್ನು ನೀವು ನಿಲ್ಲಿಸಬೇಕು ಎಂದು ಶಿರ ಹಟ್ಟಿಯ ಶ್ರೀ ಜ. ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ ಸಚಿವ ಸಿ.ಸಿ. ಪಾಟೀಲರಿಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದು ದಿಂಗಾಲೇಶ್ವರ ಸ್ವಾಮೀಜಿಗಳ ಇತಿಹಾಸ ಬಗ್ಗೆ ನಡೆದಿರುವ ವಿಚಾರವಲ್ಲ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಲಿ. ವ್ಯಕ್ತಿಯ ವಿಚಾರ, ಸೈದ್ಧಾಂತಿಕ ವಿಚಾರ ಹಾಗೂ ಇತಿಹಾಸದ ವಿಚಾರಗಳೇ ಬೇರೆ. ವ್ಯಕ್ತಿಯ ವಿಚಾರವನ್ನು ತೆಗೆದುಕೊಂಡರೆ ಅದಕ್ಕೆ ಒಂದು ವೇದಿಕೆ ನಿರ್ಮಾಣ ಮಾಡೋಣ ನಾವು ಕೂಡಾ ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು.

ನಿಮ್ಮ ರಾಜಕಾರಣಕ್ಕೆ ಮಠಗಳು ಸಾಕಾ ಗುತ್ತಿಲ್ಲ ಎನ್ನುವುದು ದುರಂತದ ಸಂಗತಿ. ನಿಮ್ಮ ಪಕ್ಷದ ಸಿದ್ದಾಂತಗಳು ಮಠಗಳ ಪರವಾಗಿ ಇವೆಯೋ ಅಥವಾ ಮಠಗಳನ್ನು ನಾಶಪಡಿಸುವುದರ ಜೊತೆಗೆ ಇವೆಯೋ ಅನ್ನುವ ವಿಚಾರವನ್ನು ಸ್ಪಷ್ಟಪಡಿಸಬೇಕು.

ಜಿಲ್ಲಾ ಕೇಂದ್ರ 20, ನರಗುಂದದಿAದ ಕೇವಲ 50 ಕಿ.ಮೀ ದೂರದಲ್ಲಿರುವ ಶಿರಹಟ್ಟಿ ಮಠದ ಬಗ್ಗೆ ಇವರಿಗೆ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ಜ.ಫ.ಸಿದ್ದರಾಮ ಸ್ವಾಮೀಜಿ (ಗುರುಗಳು) ಗಳನ್ನು ವರ್ಣಿಸಿ, ನಮ್ಮ ಬಗ್ಗೆ ತೇಜೋವಧೆ ಮಾಡಿ, ಗುರು-ಶಿಷ್ಯರಲ್ಲಿ ಬೇಧ ಭಾವ ವನ್ನುಂಟು ಮಾಡುವ ಉದ್ದೇಶ ಸಚಿವರಿಗೆ ಇದ್ದಂತೆ ಕಾಣಿಸುತ್ತಿದೆ. ತೋಂಟದಾರ್ಯ ಮಠಕ್ಕೂ, ಶಿರಹಟ್ಟಿ ಮಠಕ್ಕೂ ಬೆಂಕಿ ಹಚ್ಚುವ ಕೆಲಸವನ್ನು ಸಿ.ಸಿ. ಪಾಟೀ ಲರು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡು ತ್ತಿದೆ. ಇತಿಹಾಸ  ಅರಿಯದೇ, ಸ್ಥಾನ ದ್ರೋಹ, ಸಿದ್ದಾಂತ ದ್ರೋಹವನ್ನು ಮಾಡಿದರೆ ನಮ್ಮ ಹೋರಾಟ ನಿಲ್ಲುವದಿಲ್ಲ. ಯಾವುದೇ ತ್ಯಾಗ, ಹೋರಾ ಟಕ್ಕೂ ನಾನು ಸಿದ್ದ ಎಂದು ಎಚ್ಚರಿಸಿದರು.

ತೋಂಟದ ಸಿದ್ದಲಿಂಗ ಸ್ವಾಮೀಜಿಗಳಿಗೆ ಪ್ರಶಸ್ತಿ ಕೊಡಬೇಡಿ ಅನ್ನುತ್ತಿಲ್ಲ, ಇದನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಬೇಕು. ಪ್ರಶಸ್ತಿಗಳು ಒಂದಲ್ಲ ನೂರು ಮಾಡಲಿ. 364 ದಿನವೂ ಅವರ ಜನ್ಮದಿನ ಕ್ಕಾಗಲೀ ಅಥವಾ ಅವರ ಸಾಧನೆಗೆ ಮೀಸ ಲಿಡಿ. ಅದಕ್ಕೆ ನಮ್ಮ ವಿರೋಧವಿಲ್ಲ. ಅವರು ಭಾವೈಕ್ಯತೆಯ ಶಬ್ದಕ್ಕೆ ಕಡು ವೈರಿಯಾಗಿದ್ದಾರೆ.

 -ಜ.ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ

Leave a Reply

Your email address will not be published. Required fields are marked *