ಬೆಳಹೋಡ: ಸಿಡಿಲಿಗೆ 11 ಕುರಿಗಳು ಬಲಿ
ಪ್ರಜಾಪಥ ವಾರ್ತೆ
ಗದಗ: ಸಿಡಿಲು ಬಡಿದು 10 ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಬೆಳಹೊಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೇಕೆಗಳು ಗ್ರಾಮದ ಕುರಿಗಾಹಿ ಬಸವಂತಪ್ಪ ಬಾಡಿಗೆ ಎನ್ನುವವರಿಗೆ ಸೇರಿವೆ ಎನ್ನಲಾಗಿದೆ. ಮಳೆ ಬಂದಿದ್ದ ವೇಳೆ ರಕ್ಷಣೆಗೆ ಹುಣಸೆ ಮರದ ಕೆಳಗೆ ನಿಂತಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಉಪಸ್ಥಿತರಿದ್ದ ಕುರಿಗಾಹಿಪ್ರಾ ಣಾಪಾಯದಿಂದ ಪಾರಾಗಿದ್ದಾರೆ. ಎನ್ನಲಾಗಿದೆ. ಗದಗ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.