ಅಕ್ರಮವಾಗಿ ಸಂಗ್ರಹಿಸಿದ್ದ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ-18 ಸಿಲಿಂಡರ್ ಸೇರಿ ಮಷಿನ್ ವಶ
ಬೆಟಗೇರಿಯಲ್ಲಿ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಅಡ್ಡೆ
ಪ್ರಜಾಪಥ ವಾರ್ತೆ
ಗದಗ: ಅಕ್ರಮವಾಗಿ ಜನವಸತಿ ಪ್ರದೇಶದಲ್ಲಿಯೇ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಬೆಟಗೇರಿಯ ಕುರಹಟ್ಟಿಪೇಟೆಯಲ್ಲಿ ನಡೆದಿದೆ.
ದಾಳಿ ವೇಳೆ ಅಧಿಕಾರಿಗಳು ಅಡ್ಡೆಯಲ್ಲಿ ಅಕ್ರಮವಾಗಿ ಇದ್ದ 14.2 ಕೆ.ಜಿ.ಯ (ಮನೆ ಬಳಕೆ) 14 ಸಿಲಿಂಡರ್, 19 ಕೆ.ಜಿ.ಯ (ವಾಣಿಜ್ಯ ಬಳಕೆಯ) 2 ಕರ್ಮರ್ಷಿಯಲ್ ಸಿಲಿಂಡರ್, ಐದು ಕೆ.ಜಿ ಸಿಲಿಂಡರ್ನ 2 ಸಿಲಿಂಡರ್, ಫಿಲ್ಲಿಂಗ್ ಮಷಿನ್ ವಶಕ್ಕೆ ಪಡೆದಿದ್ದಾರೆ.
ಭಾರತ್ ಗ್ಯಾಸ್ ಕಂಪನಿಗೆ ಸೇರಿದ್ದ ಸಿಲಿಂಡರ್ ಬಳಸಿ ಫಿಲ್ಲಿಂಗ್ ದಂಧೆ ನಡೆಯುತ್ತಿತ್ತು. ಈ ಕುರಿತು ಸಾರ್ವಜನಿಕರ ನೀಡಿದ ದೂರು ಆಧರಿಸಿ ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನಾಯಕ್ ನೇತೃತ್ವದ ಅಧಿಕಾರಿಗಳ ತಂಡವು ದಾಳಿ ನಡೆಸಿದೆ.
ಅಕ್ರಮವಾಗಿ ಫಿಲ್ಲಿಂಗ್ ಮಾಡುತ್ತಿದ್ದ ಸಿಲಿಂಡರ್ ಅಡ್ಡೆ ಮಾಲೀಕ ಮಲ್ಲಿಕರ್ಜುನ್ ಕುಂಬಾರ್, ಗಿರೀಶ್ ಕುಂಬಾರ ಎಂಬಾತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.