ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೋಹನ ಮಾಳಶೆಟ್ಟಿ ರಾಜೀನಾಮೆ
ಪ್ರಜಾಪಥ ವಾರ್ತೆ
ಗದಗ: ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷರಾಗಿದ್ದ ಮೋಹನ ಮಾಳಶೆಟ್ಟಿ ಅವರು ರವಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Dist. President Rajiname Later 01-05-2022
ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರಿಗೆ ರವಾನಿಸಿದ್ದಾರೆ. ವೈಯಕ್ತಿಕ ಕಾರಣವನ್ನು ಮಾಳಶೆಟ್ಟಿ ಅವರು ನಮೂದಿಸಿದ್ದಾರೆ.
Dist. President Rajiname Later 2 01-05-2022
ಕಳೆದ ಒಂಭತ್ತು ವರ್ಷಗಳಿಂದ ಸಂಘಟನಾ ಕಾರ್ಯದರ್ಶಿಯಿಂದ ಹಿಡಿದು, ಇಂದಿನ ಜಿಲ್ಲಾಧ್ಯಕ್ಷ ಸ್ಥಾನವರೆಗೂ ನಿಭಾಯಿಸಲು ಸಹಕರಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಶಾಸಕ ಕಳಕಪ್ಪ ಬಂಡಿ ಸೇರಿ ಜಿಲ್ಲೆಯ ಶಾಸಕ-ಸಂಸದರಿಗೂ ಅವರು ಅಭಿನಂದನೆ ಸಲ್ಲಿಸಿದ್ದಾರೆ.