ಗದಗ ಸೇರಿ ರಾಜ್ಯದಲ್ಲಿ ಮಂಗಳವಾರ ರಂಜಾನ್ ಆಚರಣೆ

Spread the love

ಸರ್ಕಾರದ ಆದೇಶಿಸಿದ್ದ  ಸಾರ್ವತ್ರಿಕ ರಜೆ ಕುರಿತ ಗೊಂದಲ

 

ಪ್ರಜಾಪಥ ವಾರ್ತೆ

ಬೆಂಗಳೂರು/ಗದಗ: ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ರಂಜಾನ್ ಹಬ್ಬವನ್ನು ಮೇ.2 ರ ಬದಲಾಗಿ ಮೇ.3 ರಂದು ಮಂಗಳವಾರ ಆಚರಣೆಗೆ ಮುಸ್ಲಿಂ ಬಾಂಧವರು ನಿರ್ಧರಿಸಿದ್ದಾರೆ.

ಈದ್ ಉಲ್-ಫಿತ್ರ ಹಬ್ಬವೂ ಸೇರಿ ಎಲ್ಲ ಮುಸ್ಲಿಂ ಹಬ್ಬಗಳು ಚಂದ್ರದರ್ಶನ ಆಧರಿಸಿ ನಡೆಯುತ್ತವೆ. ಹೀಗಾಗಿ ರವಿವಾರ ಚಂದ್ರದರ್ಶನ ಆಗದ್ದರಿಂದ ಮಂಗಳವಾರವೇ ಹಬ್ಬ ಆಚರಣೆ ಇರಲಿದೆ ಎಂದು ಬೆಂಗಳೂರಿನ ಮರ್ಕಝಿ ರುಯಾತ್ ಇ-ಹಿಲಾಲ್ ಕಮೀಟಿ ಮಾಧ್ಯಮ ಪ್ರಕಟಣೆ ಮೂಲಕ ಹೇಳಿದೆ. ರವಿವಾರ ಯಾವ ಪ್ರದೇಶದಲ್ಲೂ ಚಂದ್ರದರ್ಶನ ಆಗಿಲ್ಲ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಗದಗ ಜಿಲ್ಲೆಯಲ್ಲೂ ಮಂಗಳವಾರವೇ ರಂಜಾನ್ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ಪ್ರಜಾಪಥಕ್ಕೆ ತಿಳಿಸಿದ್ದಾರೆ.

ಶನಿವಾರವಷ್ಟೇ ರಾಜ್ಯ ಸರ್ಕಾರವು ರಂಜಾನ್ ಹಬ್ಬದ ಸಾರ್ವತ್ರಿಕ ರಜೆಯನ್ನು ಮೇ.3 ರ ಬದಲಾಗಿ ಮೇ.2ಕ್ಕೆ ಎಂದು ಘೋಷಿಸಿ, ಅಧಿಸೂಚನೆ ಹೊರಡಿಸಿತ್ತು. ಇದು ಮುಸ್ಲಿಂ ಸಮಾಜ ಸೇರಿ ಎಲ್ಲ ಸರ್ಕಾರಿ ನೌಕರರಲ್ಲೂ ಗೊಂದಲ ಮೂಡಿಸಿದೆ.

Leave a Reply

Your email address will not be published. Required fields are marked *