ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿಯ ಫಕ್ಕೀರೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವ
ನಾಳೆ ಕಡುಬಿನ ಕಾಳಗ- ಶ್ರೀ ಜಗದ್ಗುರು ಫಕೀರಸಿದ್ದಾರಾಮ ಶ್ರೀಗಳು ಅಶ್ವಾರೂಢರಾಗಿ ಪ್ರದಕ್ಷಿಣೆ
ಪ್ರಜಾಪಥ ವಾರ್ತೆ
ಶಿರಹಟ್ಟಿ: ಕೋಮು ಸೌಹಾರ್ದದ ಪ್ರತೀಕ, ಹಿಂದೂ-ಮುಸ್ಲಿಂರ ಭಾವೈಕ್ಯತೆಯ ನಾಡಾದ ಶಿರಹಟ್ಟಿಯ ಐತಿಹಾಸಿಕ ಫಕ್ಕೀರೇಶ್ವರ ಮಹಾಸ್ವಾಮಿಗಳ ರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತ ಸಮೂಹದ ಶ್ರದ್ಧೆ-ಭಕ್ತ, ಸಡಗರದ ಮಧ್ಯೆ ಸಂಭ್ರಮದಿಂದ ನಡೆಯಿತು.
ಫಕೀರೇಶ್ವರ ಮಹಾರಾಜ ಕೀ ಜೈ.., ಹರಹರ ಮಹಾದೇವ…, ಫಕೀರ ನಾನಾಕಿ ದೋಸ್ತರ ಹೋ ದೀನ… ಎಂದು ಭಕ್ತರು ಜೈಕಾರ ಹಾಕುತ್ತ ರಥದ ಬೀದಿಯಲ್ಲಿ ಫಕ್ಕೀರೇಶ್ವರ ಮಹಾಸ್ವಾಮಿಗಳ ರಥ ಎಳೆದು ಸಂಭ್ರಮಿಸಿದರು. ಭಕ್ತರು ಚಲಿಸುವ ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಮಾವಿನಹಣ್ಣು ಬಾಳೆಹಣ್ಣು ಎಸೆದು ನಮಿಸಿದರು.
ರಥೋತ್ಸವದಲ್ಲಿ ಗದಗ ಜಿಲ್ಲೆ ಸೇರಿ ದೂರದ ಆಸ್ಟ್ರೇಲಿಯಾ, ಅಮೇರಿಕಾ ಜೊತೆಗೆ ಬೆರೆಯ ರಾಜ್ಯಗಳಾದ ಗೋವಾ, ಗುಜರಾತ, ಮಹಾರಾಷ್ಟ್ರ ರಾಜ್ಯ ಸೇರಿದಂತೆ ರಾಜ್ಯದ ವಿಜಯಪುರ, ಬೀದರ, ಗುಲಬುರ್ಗಾ, ಧಾರವಾಡ, ಹಾವೇರಿ, ಕೊಪ್ಪಳ, ಹುಬ್ಬಳ್ಳಿ, ಬೆಳಗಾಂ, ಬೆಂಗಳೂರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಇಂದು ಕಡುಬಿನ ಕಾಳಗ: ಶ್ರೀ ಜಗದ್ಗುರು ಫಕೀರೇಶ್ವರರ ಜಾತ್ರಾಮಹೋತ್ಸವ ದ ಅಂವಾಗಿ ಮೇ 17 ರಂದು ಕಡುಬಿನ ಕಾಳಗ ನಡೆಯಲಿದೆ.ಶ್ರೀ ಜಗದ್ಗುರು ಫಕೀರಸಿದ್ದಾರಾಮ ಮಹಾಸ್ವಾಮಿಗಳು ಅಶ್ವಾರೂಢರಾಗಿ ಸಂಪ್ರದಾಯದಂತೆ ಹನ್ನೇರಡು ಗದ್ದುಗೆಗಳ ಸುತ್ತ ಪ್ರದಕ್ಷಿಣಿ ಹಾಕುತ್ತ ಬೆಲ್ಲದ ಚೂರುಗಳನ್ನು ಭಕ್ತರತ್ತ ಎಸೆಯುತ್ತಾರೆ.