ಪ್ರಜಾಪಥ ವಾರ್ತೆ
ಗದಗ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರ ಮತಯಾಚನೆಗೆ ಗದುಗಿಗೆ ಬಂದಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸಭಾ ಕಾರ್ಯಕ್ರಮಕ್ಕೆ ಬಾರದೇ ಮರಳಿದ್ದಾರೆ.
ಸಂಜೆ 5 ಗಂಟೆಗೆ ಅವರ ಕಾರ್ಯಕ್ರಮ ಗದಗನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಿಗದಿಯಾಗಿತ್ತು. ಆದರೆ, ಏಳು ಗಂಟೆಯ ಸುಮಾರಿಗೆ ಗದುಗಿಗೆ ಬಂದ ಅವರು, ವಿಮಾನ ವಿಳಂಬ ಆಗುವ ಉದ್ದೇಶದಿಂದ ಹೆಲಿಪ್ಯಾಡ್ ನಿಂದಲೇ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಶುಭ ಕೋರಿ ಹೋಗಿದ್ದಾರೆ.
