ಪ್ರಜಾಪಥ ವಾರ್ತೆ
ಗದಗ: 2023-24 ನೇ ಸಾಲಿನ SSLC ಫಲಿತಾಂಶ ಇಂದು ಪ್ರಕಟವಾಗಿದ್ದು, ಗದಗ ಜಿಲ್ಲೆಯು 17ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
15,545 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 11,621 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 74.76ರಷ್ಟು ಫಲಿತಾಂಶ ದಾಖಲಾಗಿದೆ.
ಕಳೆದ ವರ್ಷ ಶೇ. 86.51ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 25ನೇ ಸ್ಥಾನ ಪಡೆದಿತ್ತು.
ಶೇಕಡಾವಾರು ಫಲಿತಾಂಶದಲ್ಲಿ ಶೇ. 11.75ರಷ್ಟು ಕಡಿಮೆಯಾಗಿದ್ದರೂ, ರ್ಯಾಂಕಿಂಗ್ ನಲ್ಲಿ 8 ಸ್ಥಾನ ಮೇಲಕ್ಕೇರಿದೆ