ಪ್ರಜಾಪಥ ವಾರ್ತೆ
ಗದಗ: ಜಾತ್ರೆಯಲ್ಲಿ ರಥೋತ್ಸವ ವೇಳೆ ನೂಕು ನುಗ್ಗಲು ಉಂಟಾಗಿ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವನ್ನಪ್ಪಿರುವ ಘಟನೆ, ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ ನಡೆದಿದೆ.
ಇಬ್ಬರು ಭಕ್ತರಲ್ಲಿ ಓರ್ವ ಮಲ್ಲಪ್ಪ ಲಿಂಗನಗೌಡರ (೫೫) ಎಂದು ತಿಳಿದು ಬಂದಿದ್ದು, ಮತ್ತೋರ್ವನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಓರ್ವನ ತಲೆ ಮೇಲೆ ರಥದ ಚಕ್ರ ಹಾದು ಹೋಗಿದ್ದು, ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೋರ್ವನ ಬೆನ್ನಿನ ಮೇಲೆ ರಥದ ಚಕ್ರ ಹತ್ತಿಳಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಥೋತ್ಸವಕ್ಕೆ ಎಸೆಯುವ ಉತ್ತತ್ತಿ ಆರಿಸುವಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.