ಗದಗ ಜಿಲ್ಲಾ ಗ್ರಾಹಕರ ಹಿತರಕ್ಷಣ ಹಾಗೂ ಪರಿಹಾರ ವೇದಿಕೆ ಆದೇಶ
ಪ್ರಜಾಪಥ ವಾರ್ತೆ
ಗದಗ: ಗದಗ ಜಿಲ್ಲಾ ಗದಗ ತಾಲೂಕ ಹರ್ಲಾಪುರ ಗ್ರಾಮದ ಸಹಕಾರ ಕೃಷಿ ಸಂಘಕ್ಕೆ ಸೇವಾ ನ್ಯೂನತೆಗಳ ಸಾಬೀತ ಆಗಿದ್ದರಿಂದ ಅದೇ ಗ್ರಾಮದ ರೈತ ಯಶ್ವಂತ್ ಬಿದರಳ್ಳಿ ಅವರಿಗೆ 10,000 ರೂಪಾಯಿಗಳ ಪರಿಹಾರ ಹಾಗೂ 5,000 ರೂಪಾಯಿಗಳನ್ನು ಕೋರ್ಟ್ ನ ವೆಚ್ಚವೆಂದು ದಂಡ ವಿಧಿಸಿದೆ.
ಪ್ರಕರಣದ ವಿವರ: ಗದಗ ಜಿಲ್ಲಾ ಗದಗ ತಾಲೂಕ ವ್ಯಾಪ್ತಿಯಲ್ಲಿ ಬರುವ ಹರ್ಲಾಪುರ ಗ್ರಾಮದ ರೈತ ಯಶ್ವಂತ ಬಿದರಳ್ಳಿ, ಹರ್ಲಾಪುರ ಗ್ರಾಮದಲ್ಲಿರುವ ಪ್ರಾರ್ಥಮಿಕ ಕೃಷಿ ಸಹಕಾರ ಪತ್ತಿನ ಸಂಘದಲ್ಲಿ 16.12.2021 ರಂದು 50,000 ರೂಪಾಯಿಗಳ ಬೆಳೆ ಸಾಲವನ್ನು ಪಡೆದಿದ್ದರು. ಹಾಗೆಯೇ ಅದನ್ನು 15.12.2022 ರಂದು ಮರುಪಾವತಿ ಮಾಡಿದ್ದರು, ಮರುಪಾವತಿಗೆ ರಸೀತಿಯನ್ನು ಕೂಡ ಸಹಕಾರ ಸಂಘದ ಕಾರ್ಯದರ್ಶಿ ನೀಡಿದ್ದರು.
ಸಂಘದ ಕಾರ್ಯದರ್ಶಿ ರೈತ ಮರುಪಾವತಿ ಮಾಡಿದ ಹಣವನ್ನು ವೈಯಕ್ತಿಕ ಖರ್ಚು ಮಾಡಿ ದುರುಪಯೋಗಪಡಿಸಿಕೊಂಡು ಸಹಕಾರ ಸಂಘಕ್ಕೆ ಆ ಹಣವನ್ನು ಜಮೆ ಮಾಡಿದ್ದಿಲ್ಲ. ಇದರಿಂದ ರೈತ ಯಶವಂತ ಬಿದರಳ್ಳಿ ಹಣ ಕಟ್ಟಿದ್ದರೂ ಕೂಡ ಅವರು ಸಾಲಗಾರರಾಗಿಯೇ ಉಳಿದಿದ್ದರು. ಹೀಗಾಗಿ ಪ್ರಾರ್ಥಮಿಕ ಕೃಷಿ ಸಹಕಾರ ಪತ್ತಿನ ಸಂಘದಲ್ಲಿ ಪುನಃ ಸಾಲ ಸಿಕ್ಕಿದ್ದಿಲ್ಲ. ಈ ಬಗ್ಗೆ ಎಷ್ಟು ಸಾರಿ ಅವರು ಮೌಖಿಕವಾಗಿ ಹಾಗೂ ಲಿಖಿತವಾಗಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗದ ಕಾರಣ ಅವರು ಗದಗ ಜಿಲ್ಲಾ ಗ್ರಾಹಕರ ಹಿತರಕ್ಷಣ ಹಾಗೂ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿ ಪರಿಹಾರ ಕೊಡಿಸುವಂತೆ ಬೇಡಿಕೊಂಡಿದ್ದರು.
ಗದಗ ಜಿಲ್ಲಾ ಗ್ರಾಹಕರ ಹಿತರಕ್ಷಣ ಹಾಗೂ ಪರಿಹಾರ ವೇದಿಕೆ ರೈತ ಯಶ್ವಂತ ಬಿದ್ರಳ್ಳಿ ಅವರಿಗೆ ಅನ್ಯಾಯವಾಗಿದ್ದನ್ನು ಮನಗಂಡು ಪ್ರಾಥಮಿಕ ಕೃಷಿ ಸಹಕಾರಿ ಸಂಘ ಹರ್ಲಾಪುರ ಸೇವಾ ನ್ಯೂನ್ಯತೆಗಾಗಿ ರೈತನಿಗೆ 10,000 ಪರಿಹಾರ ಹಾಗೂ 5,000 ಕಾನೂನಿನ ವೆಚ್ಚ ಭರಿಸಲು ಹಾಗೂ ಸಾಲ ಮುಟ್ಟಿರುವ ಬಗ್ಗೆ ಏನ್ ಓ ಸಿ ನೀಡಬೇಕೆಂದು ಆದೇಶ ಹೊರಡಿಸಿದೆ. ರೈತನ ಪರವಾಗಿ ವಕೀಲ ವೆಂಕನಗೌಡ ಗೋವಿಂದಗೌಡ್ರ ವಾದ ಮಂಡಿಸಿದರು
ಹರ್ಲಾಪುರ ಗ್ರಾಮದ ಸಹಕಾರ ಕೃಷಿ ಸಂಘದ ಸೇವಾ ನ್ಯೂನತೆಗಳು ಸಾಬೀತಾಗಿದ್ದರಿಂದ ಅದೇ ಗ್ರಾಮದ ರೈತ, ನಮ್ಮ ಕಕ್ಷಿದಾರ ಯಶ್ವಂತ್ ಬಿದರಳ್ಳಿ ಅವರಿಗೆ ಗದಗ ಜಿಲ್ಲಾ ಗ್ರಾಹಕರ ಹಿತರಕ್ಷಣ ಹಾಗೂ ಪರಿಹಾರ ವೇದಿಕೆ ಮೂಲಕ ನ್ಯಾಯ ಸಿಕ್ಕಿದೆ.
– ವೆಂಕನಗೌಡ ಗೋವಿಂದಗೌಡ್ರ, ರೈತನ ಪರ ವಕೀಲ