ಪ್ರಜಾಪಥ ವಾರ್ತೆ
ಕುಶಾಲನಗರ (ಕೊಡಗು): ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಬೆಂಕಿ ರಹಿತ ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾಲೇಜಿನ ವಿದ್ಯಾರ್ಥಿಗಳು ತಮಗೆ ತೋಚಿದಂತಹ ತಿನಿಸುಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಪ್ರವೀಣಕುಮಾರ್, ಸಹಪ್ರಾಧ್ಯಾಪಕರಾದ ಬಿ.ಡಿ.ಹರ್ಷ, ಡಾ.ಸುನಿಲ್ ಕುಮಾರ್, ಸುಧಾಕರ್, ಕುಸುಮ, ದೀಪಾ, ವಂದನಾ, ಉಪನ್ಯಾಸಕರಾದ ರಾಜೇಶ್, ಗಿರೀಶ್, ಸಿದ್ದಪ್ಪಾಜಿ, ಚರಣ್ ರಾಜ್, ನಟರಾಜು, ಸುಚಿತ್ರಾ ಮೊದಲಾದವರು ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಬೆಂಕಿ ರಹಿತ ಹಾಗು ಒಲೆ ರಹಿತ ತಿನಿಸುಗಳನ್ನು ಪರಿಶೀಲಿಸಿ ರುಚಿ ಆಸ್ವಾದಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರಶಂಸೆ ವ್ಯಕ್ತಪಡಿಸಿದರು.