ವಿ.ಆರ್.ಗೋವಿಂದಗೌಡರಿಗೆ ಆಮ್ ಆದ್ಮಿ ಪಕ್ಷದ ಬೆಂಬಲ
ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ
ಪ್ರಜಾಪಥ ವಾರ್ತೆ
ಗದಗ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥ ವಿ.ಆರ್.ಗೋವಿಂದಗೌಡ್ರ ಅವರಿಗೆ ಆಮ್ ಆದ್ಮಿ ಪಕ್ಷ ಅಧಿಕೃತ ಬೆಂಬಲ ಪ್ರಕಟಿಸಿದೆ.
ಈ ಕುರಿತು ಗೋವಿಂದಗೌಡ್ರ ಅವರಿಗೆ ಪತ್ರ ಬರೆದಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ‘ಆಮ್ ಆದ್ಮಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇದ್ದಲ್ಲಿ ಅಭ್ಯರ್ಥಿಯ ಮನವಿ ಹಾಗೂ ವೈಯಕ್ತಿಕ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ಸ್ವತಂತ್ರವಾಗಿ ಸ್ಪರ್ಧಿಸುವ ಅಭ್ಯರ್ಥಿಯಾದ ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.
ಯಂಗ್ ಇಂಡಿಯಾ ಶಿಕ್ಷಕರ ಪರಿವಾರದ ಸದಸ್ಯರು ಹಾಗೂ ವಿ.ಆರ್.ಗೋವಿಂದಗೌಡ್ರ ಅಭಿಮಾನಿ ವರ್ಗ, ಶಿಕ್ಷಕರು ಆಪ್ ಬೆಂಬಲಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.