ಪ್ರಜಾಪಥ ವಾರ್ತೆ
ಮುಳಗುಂದ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರ, ಜಿಲ್ಲಾ ಘಟಕ ಗದಗ ಆಶ್ರಯದಲ್ಲಿ ಮುಳಗುಂದ ಕಾರ್ಯನಿರತ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆಯು ಆ.4 ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಎಂ.ಕೆ.ಬಿ.ಎಸ್ ಶಾಲೆ ನಂ.1ರಲ್ಲಿ ಜರುಗಲಿದೆ.
ಸಾನಿಧ್ಯವನ್ನು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ವಹಿಸಿವರು. ಕಾರ್ಯಕ್ರಮವನ್ನು ಗಣ್ಯರಾದ ಆರ್.ಸಿ.ಕಮಾಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನ ಕಾನಿಪಸಂ ಮುಳಗುಂದ ಘಟಕದ ಅಧ್ಯಕ್ಷ ಎಂ.ಎಂ.ಜಮಾಲಸಾಬನವರ ವಹಿಸುವರು. ಉಪನ್ಯಾಸವನ್ನು ಸಾಹಿತಿ ಬಿ.ಎಂ.ಹರಪ್ಪನಹಳ್ಳಿ ಅವರು ನೀಡುವರು.
ಮುಖ್ಯ ಅಥಿತಿಗಳಾಗಿ ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ನೀಲಗುಂದ, ಬಾಮಶಿ ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ, ಉದ್ಯಮಿ ಅಶೋಕ ಸೋನಗೋಜಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ, ಉದ್ಯಮಿ ಬಸವರಾಜ ಬಡ್ನಿ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಉಪಾಧ್ಯಕ್ಷ ವಿರುಪಾಕ್ಷಪ್ಪ ಕಣವಿ, ಬಿಜೆಪಿ ಮುಳಗುಂದ ಘಟಕದ ಅಧ್ಯಕ್ಷ ಮಲ್ಲಪ್ಪ ಕುಂದಗೋಳ, ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಆಡಳಿತಾಧಿಕಾರಿ ಸೈಯದ್‌ಅಲಿ ಶೇಖ, ವೈದ್ಯ ಎಸ್.ಸಿ.ಚವಡಿ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ಗದಗ ತಾಲೂಕು ವೈದ್ಯಾಧಿಕಾರಿ ಪ್ರೀತ್ ಖೋನಾ, ಗದಗ ವಾರ್ತಾಧಿಕಾರಿ ವಸಂತ ಮಡ್ಲೂರ, ಗದಗ ಸಹಾಯಕ ಕೃಷಿ ಅಧಿಕಾರಿ ಮಲ್ಲಯ್ಯ ಕೊರಣ್ಣವರ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಪಿಎಸ್‌ಐ ವಿ.ಎಸ್.ಚವಡಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಾಜುದಿನ್ ಕಿಂಡ್ರಿ, ಜಿಡಿಎಸ್ ಮುಖಂಡ ಮಂಜುನಾಥ ಅಣ್ಣಿಗೇರಿ, ಎಎಪಿ ಮುಖಂಡ ಪೀರಸಾಬ ಶೇಖ ಹಾಗೂ ಪಪಂ ಸದಸ್ಯರು ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.