- ಗದಗ ಸಂಚಾರಿ ಪೊಲೀಸರ ಕಾರ್ಯಾಚರಣೆ
- ನಂಬರ್ ಪ್ಲೇಟ್ ತಿರುಚುವುದು, ಅದರಲ್ಲಿ ಹೆಸರು ನಮೂದು
- ದಂಡ ವಿಧಿಸಿ, ವಾಹನಗಳು ವಶಕ್ಕೆ
ಪ್ರಜಾಪಥ ವಾರ್ತೆ
ಗದಗ: ಇಲ್ಲಿನ ಸಂಚಾರಿ ಠಾಣೆ ಪೊಲೀಸರು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿ 40 ದ್ವಿಚಕ್ರ ವಾಹನ ಹಾಗೂ 20ಕ್ಕೂ ಹೆಚ್ಚು ಟಂಟಂ, ಆಟೋ ಜಪ್ತಿ ಮಾಡಿದ್ದಾರೆ.
ಅವಳಿ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದ್ವಿಚಕ್ರ ವಾಹನ, ಟಂಟಂ ಮತ್ತು ಆಟೋಗಳಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿರುವುದು, ನಂಬರ್ ಪ್ಲೇಟ್ ಮರೆಮಾಚಿ ಚಾಲನೆ, ಅತಿ ವೇಗದ ಚಾಲನೆ ಮಾಡುತ್ತಿರುವವರ ವಿರುದ್ಧ ದಂಡ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.
ನಗರದೊಳಗೆ ಅತಿ ವೇಗದ ಚಾಲನೆ, ನಂಬರ್ ಪ್ಲೇಟ್ ಮರೆಮಾಚಿ ಓಡಿಸುವುದು ಇವೆಲ್ಲ ಕಾನೂನುಬಾಹಿರ. ವಾಹನ ಚಾಲಕರು ಕಾನೂನಿನ ಪ್ರಕಾರವೇ ನಡೆದುಕೊಳ್ಳಬೇಕು. ಇಲ್ಲವಾದರೆ ಅಂತಹವರನ್ನು ಗುರುತಿಸಿ, ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಂದು ವಾಹನ ಚಾಲಕರಿಗೆ ವಾಹನ ಚಾಲನಾ ನಿಯಮಗಳ ಕುರಿತು ವಿವರಿಸಿದರು.
ಅವಳಿ ನಗರದಲ್ಲಿ ಸಂಚರಿಸುತ್ತಿದ್ದ ಡಿಎಲ್, ಇನ್ಸೂರೆನ್ಸ್, ಪರ್ಮಿಟ್ ಇಲ್ಲದ ಹಾಗೂ ನಾನ್ ರೆಜಿಸ್ಟ್ರೇಶನ್ ಆಟೋಗಳನ್ನು ಸೀಜ್ ಮಾಡಲಾಗಿದೆ. ಆಟೋ ಚಾಲಕರು, ಮಾಲೀಕರು ವಾಹನಗಳನ್ನು ಸಾರಿಗೆ ಇಲಾಖೆ ನಿಯಮದಡಿ ಎಲ್ಲ ದಾಖಲಾತಿ ಹೊಂದಿರಬೇಕು. ಚಾಲನಾ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಅವಳಿ ನಗರದ ವಿವಿಧೆಡೆ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿ, ವಾಹನ ಸೀಜ್ ಮಾಡಲಾಗಿದೆ.
-ಶಕುಂತಲಾ, ಪಿಎಸ್ಐ ಸಂಚಾರಿ ಠಾಣೆ