ಗಣೇಶ ಚೌತಿ ಹಬ್ಬಕ್ಕೆ ಸಾಮಗ್ರಿ ಖರೀದಿಸಿ ಮನೆಗೆ ಮರಳುತ್ತಿದ್ದಾಗ ಅವಘಡ
ಪ್ರಜಾಪಥ ವಾರ್ತೆ
ಗದಗ: ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಹೆಡ್ ಕಾನಸ್ಟೇಬಲ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ನಗರದ ಭೂಮರೆಡ್ಡಿ ವೃತ್ತದಲ್ಲಿ ನಡೆದಿದೆ.
ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್ ಕಾನ್ಟೆಬಲ್ ಆಗಿರುವ ರಮೇಶ್ ಡಂಬಳ (45) ಮೃತ ದುರ್ದೈವಿ. ನಗರದ ಭೂಮರೆಡ್ಡಿ ವೃತ್ತದ ಸಮೀಪ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಕಾಂಕ್ರಿಟ್ ಮಿಕ್ಸರ್ ಲಾರಿ ಮಾರ್ಕೆಟ್ ಏರಿಯಾದಿಂದ ಎಪಿಎಂಸಿ ಕಡೆ ಹೊರಟಿತ್ತು.
ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಅದೇ ಮಾರ್ಕೆಟ್ ಏರಿಯಾದಿಂದ ತನ್ನ ದ್ವಿಚಕ್ರ ವಾಹನದಲ್ಲಿ ಹೆಡ್ ಕಾನ್ಟೆಬಲ್ ರಮೇಶ್ ಡಂಬಳ ಮನೆಗೆ ಹೊರಟಿದ್ದರು.
ಈ ವೇಳೆ ಓವರ್ ಟೇಕ್ ಮಾಡುವ ವೇಳೆ ಲಾರಿ ತಾಗಿದ್ದರಿಂದ ಕೆಳಗೆ ಬಿದ್ದಿದ್ದು, ಲಾರಿಯ ಚಕ್ರಗಳು ಪೇದೆಯ ತಲೆಯ ಮೇಲೆ ಹತ್ತಿ ಇಳಿದಿದ್ದರಿಂದ ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ರಭಸಕ್ಕೆ ಮೃತ ಪೇದೆಯ ತಲೆ ಒಡೆದು, ಛಿದ್ರಗೊಂಡು,ಮಾಂಸದ ತುಂಡುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಮೃತ ಪೇದೆ ಗುರುವಾರ ರಾತ್ರಿ ಪಾಳಿ (ನೈಟ್ ಡ್ಯೂಟಿ) ಮುಗಿಸಿ, ಮನೆಗೆ ಬಂದಿದ್ದರು. ಶನಿವಾರ ನಡೆಯುವ ಗಣೇಶ ಚೌತಿ ಹಬ್ಬದ ಪೂಜಾ ಸಾಮಗ್ರಿ ಖರೀದಿಗೆ ಮಾರ್ಕೆಟ್ ಗೆ ಬಂದಉ, ಮರಳಿ ಮನೆಗೆ ತೆರಳುವಾಗ ೀ ಅವಘಡ ಸಂಭವಿಸಿದೆ.
ಟ್ರಾಫಿಕ್ ಜ್ಯಾಮ್: ಘಟನೆ ಬಳಿಕ ಭೂಮರೆಡ್ಡಿ ವೃತ್ತದ ಬಳಿ ಕೆಲ ಹೊತ್ತು ಟ್ರಾಫಿಕ್ ಜ್ಯಾಮ್ ಉಂಟಾಗಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳಕ್ಕೆ ಪೊಲೀಸರ ಭೇಟಿ: ಘಟನೆ ಸ್ಥಳಕ್ಕೆ ಸಂಚಾರಿ ಠಾಣೆ ಪೊಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಟ್ರಾಫಿಕ್ ಸಿಗ್ನಲ್ ಬಂದ್ ಇದ್ದವು..!: ಭೂಮರೆಡ್ಡಿ ವೃತ್ತದಲ್ಲಿ ಸದಾ ಟ್ರಾಫಿಕ್ ಸಿಗ್ನಲ್ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಬೆಳಿಗ್ಗೆ 10.40 ರ ಸುಮಾರಿಗೆ ಟ್ರಾಫಿಕ್ ಸಿಗ್ನಲ್ ಬಂದ್ ಇದ್ದವು. ಇದರಿಂದಾಗಿ ವಾಹನಗಳು ತಮಗಿಷ್ಟವಾದಂತೆ ಸಂಚಾರ ಆರಂಭಿಸಿದ್ದವು. ಟ್ರಾಫಿಕ್ ಸಿಗ್ನಲ್ ಬಂದ್ ಆಗಿದ್ದೇ ಪೇದೆಯ ಪ್ರಾಣಕ್ಕೆ ಮುಳುವಾಗಿರಬಹುದು ಎಂಬುದು ಸ್ಥಳೀಯರ ವಾದ..