ಪ್ರಜಾಪಥ ವಾರ್ತೆ
ಗದಗ: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಗದಗ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ಗದಗ ತಾಲ್ಲೂಕು ಹುಯಿಲಗೋಳ ಗ್ರಾಮದ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಕ್ಲಬ್‌ನ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ.
ಅಭಿನAದನೆ: ಗದಗ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಕ್ಲಬ್‌ನ ಬಾಲಕಿಯರ ತಂಡಕ್ಕೆ ಹಾಗೂ ತರಬೇತಿದಾರ ವಿನಾಯಕ ಕರಮುಡಿ ಅವರಿಗೆ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಬಸವರಾಜ ರೋಣದ, ಉಪಾಧ್ಯಕ್ಷ ಮಿಲಂದ ಕಾಳಿ, ಕಾರ್ಯದರ್ಶಿ ಚಂದ್ರು ಕಂಬಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಎಫ. ನದಾಫ, ಹಿರಿಯ ಆಟಗಾರರಾದ ಎಸ್.ಎನ್. ಸೊರಟೂರ, ಹೇಮಂತ ದಾಸರ, ಪಿ.ಸಿ ಕಾಳಿ, ರಾಮಣ್ಣ ನೀರಲಗಿ, ಅಶೋಕ್ ಬೆಳಗಟ್ಟಿ, ಫಾರೂಕ್ ಲಕ್ಕುಂಡಿ, ಕಿರಣ ಲಕ್ಕುಂಡಿ ಸೇರಿ ಹುಯಿಲಗೋಳ ಸಮಸ್ತ ಗುರುಹಿರಿಯರು ಹಾಗೂ ಯುವಕರು ಅಭಿನಂದಿಸಿದ್ದಾರೆ.
ಸೆ.25ಕ್ಕೆ ಜಿಲ್ಲಾ ಮಟ್ಟದ ಸ್ಪರ್ಧೆ: ಸೆ.25 ರಂದು ದಸರಾ ಕ್ರೀಡಾಕೂಟದ ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಯಲಿದೆ.