ಮಡಿಕೇರಿ ದಸರಾ ಇತಿಹಾಸ ಪ್ರತಿಬಿಂಬಿಸುವ ಕುರಿತ ಪುಸ್ತಕ
ಪ್ರಜಾಪಥ ವಾರ್ತೆ
ಕುಶಾಲನಗರ: ಮಡಿಕೇರಿಯಲ್ಲಿ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಭಾನುವಾರ ವಾರ್ತಾ ಕಮ್ಯುನಿಕೇಷನ್ ವತಿಯಿಂದ ಹಿರಿಯ ಪತ್ರಕರ್ತ ಎಚ್.ಟಿ.ಅನಿಲ್ ಅವರು ಮಡಿಕೇರಿ ದಸರಾ ಇತಿಹಾಸ ಪ್ರತಿಬಿಂಬಿಸುವ ಕುರಿತು ಬರೆದಿರುವ ‘ಕಾಫಿ ಟೇಬಲ್ ಬುಕ್’ ಪುಸ್ತಕವನ್ನು ಜಿಲ್ಲಾಧಿಕಾರಿ ವೆಂಕಟರಾಜ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಎ.ಎಸ್ಪಿ. ಸುಂದರ್ ರಾಜ್, ಜಿಲ್ಲಾ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಡಾ ಅಧ್ಯಕ್ಷ ಬಿ.ವೈ.ರಾಜೇಶ್, ದಸರಾ ಸಮಿತಿಯ ಪ್ರಮುಖರಾದ ಜಿ.ಚಿದ್ವಿಲಾಸ್ ,ಪ್ರಕಾಶ್ ಆಚಾರ್ಯ, ಜಗದೀಶ್, ಅರುಣ್ ಶೆಟ್ಟಿ, ಎಸ್.ಐ.ಮುನಿರ್ ಅಹಮದ್ ಇದ್ದರು.