- ಪತ್ತೆಗೆ ಅಗ್ನಿಶಾಮಕದಳ ಸಿಬ್ಬಂದಿ ಹುಡುಕಾಟ – ನಾಳೆ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ
- ಗದಗ ಅಗ್ನಿಶಾಮಕದಳದ ಸಿಬ್ಬಂದಿ ವಿಜಯಕುಮಾರ್ ಹುಲಕೋಟಿ
ಪ್ರಜಾಪಥ ವಾರ್ತೆ
ಗದಗ: ನಗರದ ಗಂಗಾಪುರ ಪೇಟೆಯಲ್ಲಿರುವ ಕೊನೇರಿ ಹೊಂಡಕ್ಕೆ ಎಂಟು ವರ್ಷದ ಬಾಲಕನೊಬ್ಬ ಕಾಲು ಜಾರಿ ಬಿದ್ದಿದ್ದು, ಆತನ ಪತ್ತೆಗಾಗಿ ಅಗ್ನಿಶಾಮಕದಳದ ಸಿಬ್ಬಂದಿ ರವಿವಾರ ಸಂಜೆವರೆಗೆ ಕಾರ್ಯಾಚರಣೆ ನಡೆಸಿದರು. ಬಳಿಕ ಮಳೆ ಬಂದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡಿತು.
ಹೊಂಡದ ಬಳಿ ಆಟವಾಡುತ್ತಿದ್ದ ವೇಳೆ ಪ್ರಥಮ ಅಶೋಕ ಮಾಡೋಳ್ಳಿ (9) ಎಂಬ ಬಾಲಕ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ. ಬಾಲಕ ನೀರಿಗೆ ಬಿದ್ದು ಕಣ್ಮರೆ ಆಗಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
‘ಅಜ್ಜಿಯೊಂದಿಗೆ ವಾಸವಿದ್ದ ಎಂಟು ವರ್ಷದ ಅಶೋಕ ಭಾನುವಾರ ಹೊಂಡಕ್ಕೆ ಬಿದ್ದಿದ್ದಾನೆ. ಈ ಹೊಂಡದಲ್ಲಿ ಗಣೇಶ ವಿಗ್ರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸರ್ಜನೆ ಮಾಡಿರುವುದರಿಂದ ಬಾಲಕ ಕೆಸರಿನ ನಡುವೆ ಸಿಕ್ಕಿಹಾಕಿಕೊಂಡಿರಬಹುದು. ಭಾನುವಾರ ಸಂಜೆ ಮಳೆ ಆರಂಭಗೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಮತ್ತೇ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಗದಗ ಅಗ್ನಿಶಾಮಕದಳದ ಸಿಬ್ಬಂದಿ ವಿಜಯಕುಮಾರ್ ಹುಲಕೋಟಿ ತಿಳಿಸಿದ್ದಾರೆ.
ನಾಳೆ ಜನ್ಮದಿನ: ಕೊನೇರಿ ಹೊಂಡದಲ್ಲಿ ಕಾಲು ಜಾರಿ ಬಿದ್ದಿರುವ ಬಾಲಕನ ಜನ್ಮದಿನ ನಾಳೆ. ಅದರ ಹಿಂದಿನ ದಿನವೇ ಈ ಅವಘಡ ಸಂಭವಿಸಿರುವುದು ಬಾಲಕನ ಮನೆಯಲ್ಲಿ ಆತಂಕ ಸೃಷ್ಟಿಸಿದೆ.