ಪ್ರಜಾಪಥ ವಾರ್ತೆ
ಕುಶಾಲನಗರ : ವಿಶ್ವ ರೇಬಿಸ್ ದಿನದ ಪ್ರಯುಕ್ತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಹಾಗೂ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಮಂಗಳವಾರ ರೇಬಿಸ್ ತಡೆಗೆ ಹಾಗೂ ಲಸಿಕೆಗಳು ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ವರ್ಷದ ವಿಶ್ವ ರೇಬಿಸ್ ದಿನಾಚರಣೆಯು “Breaking Rabies boundries’ ರೇಬಿಸ್ ಗಡಿಯನ್ನು ಮುರಿಯುವುದು” ಎಂಬ ಧ್ಯೇಯದೊಂದಿಗೆ ನಡೆಯಿತು.
ಮನುಷ್ಯ ಹಾಗೂ ಪ್ರಾಣಿ ಮತ್ತು ಪರಿಸರ ಆರೋಗ್ಯದ ಪರಸ್ಪರ ಸಂಬಂಧವನ್ನು ಒತ್ತಿ ಹೇಳುತ್ತದೆ. ಈ ಕಾರ್ಯಕ್ರಮವು ಕೊಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಶಸ್ತ್ರ ಚಿಕಿತ್ಸರಾದ ಡಾ.ನಜುಂಡಯ್ಯ, ಸಮುದಾಯ ವೈದ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್, ಜಿಲ್ಲಾ ಸರ್ವೆಕ್ಷಣ ಅಧಿಕಾರಿ ಡಾ.ಶ್ರೀನಿವಾಸ್ ಹಾಗೂ ರೇಬಿಸ್ ನೋಡಲ್ ಅಧಿಕಾರಿ ಡಾ.ಕೃತಿಕ ಅವರು ಪಾಲ್ಗೊಂಡಿದ್ದರು.
ನೋಡಲ್ ಅಧಿಕಾರಿ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಪಕರಾದ ಡಾ.ಕೃತಿಕಾ ಅವರು ರೇಬಿಸ್ ರೋಗ ಎಷ್ಟು ಮಾರಕ, ರೇಬಿಸ್ ಕಾಯಿಲೆ ಹರಡುವ ಬಗ್ಗೆ ಹಾಗೂ ರೇಬಿಸ್ ಲಸಿಕೆ ತೆಗೆದುಕೊಳ್ಳುವ ವಿಧಾನ ಹಾಗೂ ರೇಬಿಸ್ ರೋಗ ತಡೆಗಟ್ಟುವಿಕೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಜುಂಡಯ್ಯ ಮಾತನಾಡಿ ರೇಬಿಸ್ ಕಾಯಿಲೆಯು ಎಷ್ಟು ಮಾರಕವೆಂದು, ಸೂಕ್ತ ಲಸಿಕೆ ಪಡೆಯುವುದು ಅನಿವಾರ್ಯ ಎಂದು ತಿಳಿಸಿದರು.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ದೀಪಿಕ ಅವರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಗೃಹ ವೈದ್ಯರು ರೇಬಿಸ್ ಹರಡುವಿಕೆ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಹೆಲ್ತ್ ಇನ್ಸಪೆಕ್ಟರ್‌ರಾದ ಮುಖೇಶ್ ಅವರು ವಂದಿಸಿದರು.