ಸಿಎಂ ತವರು ಕ್ಷೇತ್ರದಲ್ಲಿ ಗುಂಡಿನ ದಾಳಿ- ರಭಸಕ್ಕೆ ಕಿಡಕಿ ಗಾಜು ಒಡೆದು ಒಳಗೋಡೆಗೆ ರಂಧ್ರ
ಪ್ರಜಾಪಥ ವಾರ್ತೆ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕು ಹುಲಗೂರು ಗ್ರಾಮದಲ್ಲಿ (ಶಿಗ್ಗಾಂವ್ ಪೋಲಿಸ್ ಠಾಣಾ ಹದ್ದು) ಬುಧವಾರ ರಾತ್ರಿ ಶೂಟೌಟ್ ಪ್ರಕರಣ ನಡೆದಿದೆ.
ಇತ್ತೀಚೆಗೆ ಶಿಗ್ಗಾಂವಿ ಸಿನೀಮಾ ಟಾಕೀಸ್ ನಲ್ಲಿ ನಡೆದ ಶೂಟೌಟ್ ಆರೋಪಿ ಬಂಧಿಸದ ಬೆನ್ನಲ್ಲೆ ಮತ್ತೊಂದು ದಾಳಿ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.
ಹುಲಗೂರ ಗ್ರಾಮದ ಆಝಾದ್ ಓಣಿಯ 52 ವರ್ಷದ ನಿವಾಸಿ, ಕೂಲಿ ಉದ್ಯೋಗ ಮಾಡುವ ಮಾಬೂ ಸಾಬ್ ಹುಸೇನ್ ಸಾಬ್ ಗುಡಿಗೇರಿ ಇವರ ಮನೆ ಎದುರು ಯಾರೋ ಇಬ್ಬರು ವ್ಯಕ್ತಿಗಳು ಮನೆಯ ಎದುರಿಗೆ ಬಂದು ಮಹಬೂಬ್ ಸಾಬ್ ಹುಸೇನ್ ಸಾಬ್ ಗುಡಿಗೇರಿ ಇವರ ಮಗಳಾದ ಸಲ್ಮಾಬಾನು ಇವಳನ್ನು ಗುರಿಯಾಗಿಟ್ಟುಕೊಂಡು ಗುಂಡು ಹಾರಿಸಿದ್ದಾರೆ ಎನ್ನಲಾಗುತ್ತಿದರ. ಆ ವೇಳೆಯಲ್ಲಿ ಮನೆಯಲ್ಲಿ ಉಳಿದ 13 ಜನರು ಇರುವುದಾಗಿ ತಿಳಿದುಬಂದಿದೆ.
ಗುಂಡು ಹಾರಿಸಿದ ರಭಸಕ್ಕೆ ಕಿಟಕಿಯಲ್ಲಿದ್ದ ತಗಡಿನ ಮುಖಾಂತರ ಒಳಗಡೆ ಮುಖ್ಯ ಹಾಲಿನಲ್ಲಿ ಒಟ್ಟು 6 ರಂಧ್ರಗಳು ಬಿದ್ದಿರುತ್ತವೆ ಗುಂಡು ಹಾರಿಸಿದ ವೇಳೆಯಲ್ಲಿ ಕರೆಂಟು ಇಲ್ಲದಿರುವುದರಿಂದ ಗುಂಡು ಯಾರಿಗೂ ತಾಗಿಲ್ಲ.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ಭೇಟಿ ನೀಡಿ ಮನೆಯವರಿಗೆ ಆತ್ಮಸ್ಥೈರ್ಯ ತುಂಬಿ ಪೊಲೀಸ್ ಇಲಾಖೆಯವರು ಸದರಿ ಘಟನೆಯ ಬಗ್ಗೆ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ ಅಂತ ಆತ್ಮ ಸ್ಥೈರ್ಯ ತುಂಬಿದರು.