Prajapath

ಮುಖ್ಯಾಂಶಗಳು

ಲಕ್ಷ್ಮೇಶ್ವರದಲ್ಲಿ 144 ಜಾರಿ: ನಾಳೆಯ (ಶನಿವಾರ) ಬಂದ್ ಗೆ ಅವಕಾಶವಿಲ್ಲ-ಎಸ್ಪಿ ಬಿ.ಎಸ್. ನೇಮಗೌಡ

Spread the love
  • ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ 2023 ರ ಕಲಂ. 163 ಇಂದು ರಾತ್ರಿಯಿಂದಲೇ ಅನ್ವಯ
  • ಅ.20 ಬೆಳಗಿನವರೆಗೂ ಅನ್ವಯ
  • ಶಾಲಾ-ಕಾಲೇಜು, ವಹಿವಾಟು ಎಂದಿನಂತೆ

 

ಪ್ರಜಾಪಥ ವಾರ್ತೆ

ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿ ಯಿಂದ ತಾಲೂಕ ದಂಡಾಧಿಕಾರಿಗಳ ಆದೇಶನ್ವಯ ಅ.18 ರಾತ್ರಿ 10 ಗಂಟೆಯಿಂದ ದಿ.20 ಬೆಳಿಗ್ಗೆ 6 ಗಂಟೆಯವರೆಗೆ ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ 2023 ರ ಕಲಂ. 163(144) ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಪೋಲಿಸ್ ಠಾಣೆಯಲ್ಲಿ ಮಾದ್ಯಮ ಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಅ.12 ರಂದು ಗೋಸಾವಿ ಸಮಾಜದವರು ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆಯಲ್ಲಿ ಗೋಸಾವಿ ಮತ್ತು ಮುಸ್ಲಿಂ ಸಮಾಜದ ಯುವಕರ ನಡುವೆ ನಡೆದ ಗಲಾಟೆಗೆ ಸಂಬAಧಿಸಿದAತೆ  ನಡೆದ ಬೆಳವಣಿಗೆಯಲ್ಲಿ ಗೋಸಾವಿ ಸಮಾಜದವರು ಮತ್ತು ಶ್ರೀರಾಮ ಸೇನೆ ಸಂಘಟನೆಯವರು ಲಕ್ಷೆö್ಮÃಶ್ವರ ಬಂದ್ ಮಾಡುವ ಕುರಿತು ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಇನ್ನೊಂದು ಸಂಘಟನೆಯವರು ಬಂದ್ ವಿರೋಧಿಸಿದ್ದು ಈ ಹಿನ್ನಲೆಯಲ್ಲಿ ಯಾರಿಗೂ ಪ್ರತಿಭಟನೆ ಮಾಡಲು ಮತ್ತು ಬಂದ್ ಮಾಡಲು ಅವಕಾಶ ನೀಡುವದಿಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ ಸಮಾರಂಭ, ಮೆರವಣಿಗೆ ಮಾಡುವದಕ್ಕೆ ಅವಕಾಶವಿಲ್ಲ. ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಮಾರಕಾಸ್ತ್ರಗಳನ್ನು ಬಳಸುವಂತಿಲ್ಲ ಸೇರಿದಂತೆ ಕಾನೂನು ಸುವ್ಯವಸ್ಥೆಗೆ ಯಾವುದೇ ಕೃತ್ಯಗಳಲ್ಲಿ ತೊಡಗುವದನ್ನು ನಿಷೇದಿಸಿದೆ, ಈಗಾಗಲೇ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದರು.

ಈ ಕುರಿತಂತೆ ಸಾರ್ವಜನಿಕರು ಯಾವುದೇ ರೀತಿ ಗೊಂದಲಕ್ಕೊಳಗಾಗುವದು ಬೇಡ ಶನಿವಾರ ಎಂದಿನAತೆ ವ್ಯಾಪಾರ ವಹಿವಾಟು, ಶಾಲಾ ಕಾಲೇಜು ನಡೆಯಲಿವೆ, ಒತ್ತಾಯದಿಂದ ಯಾರನ್ನು ಬಂದ್ ಮಾಡಿಸಲು ಅವಕಾಶವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ವಾಸುದೇವ ಎಂ.ಸ್ವಾಮಿ, ತಾ.ಪಂ.ಇ.ಓ. ಕೃಷ್ಣಪ್ಪ ಧರ್ಮರ, ತನಿಖಾಧಿಕಾರಿ ಮಹಾಂತೇಶ ಸಜ್ಜನ ಇದ್ದರು.

ಪಿಎಸ್‌ಐ ಈರಪ್ಪ ರಿತ್ತಿ ಅವರ ಮೇಲೆ ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಸೈಬರ್ ಕ್ರೈಂ ಡಿವೈಎಸ್‌ಪಿ ಮಹಾಂತೇಶ ಸಜ್ಜನ ಅವರ ನೇತೃತ್ವದಲ್ಲಿ ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಿ ತನಿಖೆ ಕೈಗೊಂಡಿದೆ. ಇದನ್ನು ಹೊರತು ಪಡಿಸಿ ಬೇರೆ ಏನಾದರೂ ವಿಷಯಗಳಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವದು..

-ಬಿ.ಎಸ್. ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!