- ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮ
ಪ್ರಜಾಪಥ ವಾರ್ತೆ
ಗದಗ: ನರಗುಂದ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸಿ.ಸಿ. ಪಾಟೀಲ ಅವರ 66 ನೇ ಜನ್ಮದಿನವನ್ನು ಗದಗನಲ್ಲಿ ಅವರ ಅಭಿಮಾನಿಗಳು ಆಚರಿಸಲು ನಿರ್ಧರಿಸಿದ್ದ ಅಕ್ಟೋಬರ್ 21 ರ ಸೋಮವಾರ ದ ಕಾರ್ಯಕ್ರಮವನ್ನು ಬುಧವಾರ, ಅಕ್ಟೋಬರ್ 23 ರಂದು ಆಚರಿಸಲು ತೀರ್ಮಾನಿಸಿದೆ.
ಗದಗ ಭಾರತೀಯ ಜನತಾ ಪಾರ್ಟಿ ಹಾಗೂ ಅವರ ಅಭಿಮಾನಿ ಬಳಗ ಜಂಟಿಯಾಗಿ ವಿನೂತನವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದ್ದುಗೆಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವರ ಅಭಿಮಾನಿಗಳು ಸಿ.ಸಿ.ಪಾಟೀಲರ ಜನ್ಮದಿನವನ್ನು ಆಚರಿಸುವರು.
ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮ: ಸಿ.ಸಿ.ಪಾಟೀಲರ ಜನ್ಮದಿನದ ಪ್ರಯುಕ್ತ ಗದಗ ಭಾರತೀಯ ಜನತಾ ಪಾರ್ಟಿ ಹಾಗೂ ಅವರ ಅಭಿಮಾನಿ ಬಳಗ ಜಂಟಿಯಾಗಿ ಅಂಧ ಅನಾಥರಿಗೆ, ಕಾಶೀ ಪೀಠದ ವಟುಗಳಿಗೆ ಹಾಗೂ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಮಾಡಲಾಗುತ್ತಿದ್ದು, ಕಾರ್ಯಕ್ರಮವು ಜಿಲ್ಲಾ ಕ್ರೀಡಾಂಗಣ ಬಳಿಯ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ನಡೆಯಲಿದೆ.
ಶಾಸಕ ಸಿ.ಸಿ. ಪಾಟೀಲರೂ ಭಾಗಿ: ನರಗುಂದ ಶಾಸಕರಾದ ಸಿ.ಸಿ.ಪಾಟೀಲ ಸಾಹೇಬರು ಈ ಜನ್ಮದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಆಗಮಿಸಿ ಸಿ.ಸಿ.ಪಾಟೀಲ ಅಭಿಮಾನಿ ಬಳಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕಾರಣ ಭಾರತೀಯ ಜನತಾ ಪಾರ್ಟಿಯ ಪ್ರಮುಖರುಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ವಿಶೇಷವಾಗಿ ಸಿ.ಸಿ.ಪಾಟೀಲ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗದಗ ಭಾರತೀಯ ಜನತಾ ಪಾರ್ಟಿ ಹಾಗೂ ಅವರ ಅಭಿಮಾನಿ ಬಳಗ ವಿನಂತಿಸಿದ್ದಾರೆ.
