- ಗಜೇಂದ್ರಗಡ ತಾಲ್ಲೂಕಿನವ ದೆಗೋಳ ಗುಡ್ಡದಲ್ಲಿ ಬೋನಿಗೆ ಬಿದ್ದ ಚಿರತೆ
- ಹಲವು ದಿನಗಳಿಂದ ನಿದ್ದೆಗೆಡಿಸಿದ್ದ ಚಿರತೆ
ಪ್ರಜಾಪಥ ವಾರ್ತೆ
ಗಜೇಂದ್ರಗಡ: ತಾಲೂಕಿನ ವದೆಗೋಳ ಗ್ರಾಮ ಬಳಿಯ ಗುಡ್ಡದಲ್ಲಿ ಅವಿತುಕೊಂಡಿದ್ದ ಚಿರತೆ ಕೊನೆಗೂ ಬುಧವಾರ ಬೆಳಿಗ್ಗೆ ಬೋನಿಗೆ ಬಿದ್ದಿದೆ.
ಹಲವು ದಿನಗಳಿಂದ ಈ ಭಾಗದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆ ಬೋನಿಗೆ ಬಿದ್ದಿದ್ದು, ಇನ್ನು ಹಲವು ಚಿರತೆಗಳಿರಬಹುದು ಎಂದು ಗ್ರಾಮಸ್ಥರು ಆತಂಕ ಹೊರ ಹಾಕುತ್ತಿದ್ದಾರೆ.
ಬೋನಿಗೆ ಬಿದ್ದಿರುವ ಹೆಣ್ಣು ಚಿರತೆ, ಸಾರ್ವಜನಿಕರನ್ನು ಕಂಡು, ಘರ್ಜಿಸುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.