Prajapath

ಮುಖ್ಯಾಂಶಗಳು

ನಾಳೆ-ಗದಗ ಬೆಟಗೇರಿ ಬಂದ್; ಏತಕ್ಕಾಗಿ.. ಕರೆ ಕೊಟ್ಟಿದ್ಯಾರು?-ಬಸ್ ಸಂಚಾರ ಓಡಾಟದಲ್ಲಿ ವ್ಯತ್ಯಾಸವಿದೆಯಾ..

Spread the love

 

ಪ್ರಜಾಪಥ ವಾರ್ತೆ

ಗದಗ:ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಸಂಸತ್ ಕಲಾಪದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಇದೇ ಮಂಗಳವಾರ 24 ರಂದು *ಗದಗ ಬಂದ್* ಗೆ ಗದುಗಿನ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಲಾಗಿದೆ.

ಬಿ.ಜೆ.ಪಿ ಹಾಗೂ ಆರ್.ಎಸ್.ಎಸ್ ಸಂಘಟನೆ ಸಂವಿಧಾನ ಜಾರಿ ಬಂದಾಗಿನಿಂದಲೂ ಅವರು ಅಂಬೇಡ್ಕರ ಅವರಿಂದ ರಚಿತವಾದ ಸಂವಿಧಾನವನ್ನು ಒಪ್ಪಿಕೊಂಡಿಲ್ಲ.ಇಡೀ ದೇಶದಲ್ಲಿ ಮನುಸ್ಮೃತಿ ಯನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ.

ಅಮೀತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆ ಇಡೀ ದೇಶದ ದಲಿತರ ಹಾಗೂ ಪ್ರಗತಿಪರರ ಭಾವನೆಗಳಿಗೆ ಧಕ್ಕೆಯಾಗಿದೆ.ಇದನ್ನು ಖಂಡಿಸಿ ಇದೇ 24 ಮಂಗಳವಾರದಂದು ಗದಗ ಬಂದ್ ಗೆ ಕರೆ ಕೊಟ್ಟಿದ್ದು ಈ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಸ್‌ ಸಂಚಾರದಲ್ಲಿ ಬದಲಾವಣೆ: ಗದಗ ಬಂದ್‌ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಸಂಚರಿಸುವ ಮುಂಡರಗಿ– ಕೊಪ್ಪಳ ಮಾರ್ಗದ ಬಸ್‌ಗಳು ಮುಖ್ಯ ಬಸ್‌ ನಿಲ್ದಾಣಕ್ಕೆ ಬರದೇ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನವರೆಗೆ ಸಂಚರಿಸಲಿವೆ.

ರೋಣ, ಗಜೇಂದ್ರಗಡದಿಂದ ಗದಗಕ್ಕೆ ಬರುವ ಬಸ್‌ಗಳು ಬೆಟಗೇರಿ ಬಸ್‌ ನಿಲ್ದಾಣದವರೆಗೆ ಕಾರ್ಯಾಚರಿಸಲಿವೆ.

ಹುಬ್ಬಳ್ಳಿ, ಅಣ್ಣಿಗೇರಿಯಿಂದ ಗದಗಕ್ಕೆ ಬರುವ ಬಸ್‌ಗಳು ಕೆಇಬಿ ಕ್ರಾಸ್‌ವರೆಗೆ, ಲಕ್ಷ್ಮೇಶ್ವರ, ಶಿರಹಟ್ಟಿಯಿಂದ ಗದಗಕ್ಕೆ ಬರುವ ಬಸ್‌ಗಳು ದೋಭಿ ಘಾಟ್‌ವರೆಗೆ, ಹೊಂಬಳದಿಂದ ಗದಗಕ್ಕೆ ಬರುವ ಬಸ್‌ಗಳು ಹೊಂಬಳ ನಾಕಾವರೆಗೆ ಮತ್ತು ಸವಡಿ ಮತ್ತು ಹುಯಿಲಗೋಳದಿಂದ ಗದಗಕ್ಕೆ ಬರುವ ಬಸ್‌ಗಳು ರಾಣಾ ಪ್ರತಾಪ್‌ ಶಾಲೆವರೆಗೆ ಸಂಚರಿಸಲಿವೆ.

ಡಿ. 24ರಂದು ಮಂಗಳವಾರ ಬೆಳಿಗ್ಗೆ 6 ರಿಂದ ಬಂದ್ ಆರಂಭವಾಗಲಿದ್ದು, ಗಾಂಧಿ ಸರ್ಕಲ್‌ನಲ್ಲಿ ಬೆಳಿಗ್ಗೆ 11ಕ್ಕೆ ಬಹಿರಂಗ ಸಭೆ ಇರಲಿದೆ. ಅಂಗಡಿ ಮುಂಗಟ್ಟು ಮುಚ್ಚಲು ಒತ್ತಡವಿಲ್ಲ. ಸ್ವ ಇಚ್ಛೆಯಿಂದ ಬಂದ್‌ಗೆ ಸಹಕರಿಸಲಿ.

-ಶರೀಫ ಬಿಳೆಯಲಿ, ದ.ಸಂ.ಸ. ಮುಖಂಡ

 

 

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!