ಗದುಗಿಗೆ ಇಂದು ಬಿ.ವೈ. ವಿಜಯೇಂದ್ರ
ಪ್ರಜಾಪಥ ವಾರ್ತೆ
ಗದಗ: ಭಾರತೀಜ ಜನತಾ ಪಕ್ಷರ ರಾಜ್ಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಇಂದು (ಬುಧವಾರ ಮಾ.23) ಗದುಗಿಗೆ ಆಗಮಿಸಲಿದ್ದಾರೆ.
ನಗರದ ಮುಳಗುಂದ ರಸ್ತೆಯ ತೋಂಟೇಶ ಮಾನ್ವಿ ಅವರ ಮನೆಯಲ್ಲಿ ಬುಧವಾರ ಸಂಜೆ 5 ಗಂಟೆಗೆ ಆಯೋಜಿಸಿರುವ ಪರಮಪೂಜ್ಯ ಮೌನತಪಸ್ವಿ ಶ್ರೀ ಮ.ನಿ.ಪ್ರ. ಜಡೆಯ ಶಾಂತಲಿಂಗ ಶ್ರೀಗಳ 80 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಜ.ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಶಿರಹಟ್ಟಿ ಫಕ್ಕೀರೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಫಕ್ಕೀರ ದಿಂಗಾಲೇಶ್ವರರು, ಸೇರಿ ಹಲವರು ಭಾಗವಹಿಸುವರು.
ಸಚಿವರಾದ ಸಿ.ಸಿ. ಪಾಟೀಲ, ಆನಂದ ಸಿಂಗ್, ಶಾಸಕರಾದ ಕಳಕಪ್ಪ ಬಂಡಿ, ವೀರಣ್ಣ ಚರಂತಿಮಠ, ಎಚ್.ಕೆ. ಪಾಟೀಲ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕರಾದ ಜಿ.ಎಸ್. ಪಾಟೀಲ, ಉದ್ಯಮಿ ಡಾ.ವಿಜಯ ಸಂಕೇಶ್ವರ, ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಕಲಬುರ್ಗಿಯ ಶಿವಾನಂದ ಮಾನಕರ ಸೇರಿ ಹಲವರು ಭಾಗವಹಿಸುವರು.