Prajapath

ಮುಖ್ಯಾಂಶಗಳು

ಪ್ರಧಾನಿ‌ ಮೋದಿಯಿಂದ ದೇಶದ ಪರಿಸ್ಥಿತಿ ದಿವಾಳಿ : ಸಚಿವ ಸಂತೋಷ್ ಲಾಡ್

Spread the love
  • ನಿತಿನ ಗಡ್ಕರಿ ಅಥವಾ ನಿತೀಶಕುಮಾರ ಅವರಿಗೆ ಪ್ರಧಾನಿ ಹುದ್ದೆ  ಬಿಟ್ಟುಕೊಡಲಿ..
  • ಈ ಬಗ್ಗೆ ಕಾರ್ಯಕರ್ತರು ಧ್ವನಿ ಎತ್ತಲಿ…
  • ಹುಲಕೋಟಿಯಲ್ಲಿ ಕಾರ್ಮಿಕ ಸಮುದಾಯ ಭವನಕ್ಕೆ ಭೂಮಿ ಪೂಜೆ

 

ಪ್ರಜಾಪಥ ವಾರ್ತೆ

ಗದಗ: ದೇಶದ ಪರಿಸ್ಥಿತಿ ಈ ಪ್ರಧಾನಿ ಹುದ್ದೆಯಲ್ಲಿರೋ ಮೋದಿಯವರಿಂದ ದಿವಾಳಿ ಎದ್ದು‌ ಹೋಗಿದ್ದು, ನಿತೀನ್ ಗಡ್ಕರಿಯಂತಹ ಸೂಕ್ತರೂ ಪ್ರಧಾನಿ ಹುದ್ದೆಗೆ ಇದ್ದಾರೆ. ದೇಶದ ಹಿತದೃಷ್ಟಿಯಿಂದ ಬೇರೆಯವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ‌ ಕಾರ್ಯಕರ್ತರಾದಿಯಾಗಿ ಮುಖಂಡರು ಧ್ವನಿಯೆತ್ತಬೇಕು‌ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮನವಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ‌ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿವರೆಗೆ ಸುಮಾರು 20ಕ್ಕೂ ಹೆಚ್ಚಿನ‌‌ ಜಿಲ್ಲೆಗಳಿಗೆ ತಾವು ಪ್ರವಾಸ ಮಾಡಿದ್ದು, ಕಾರ್ಮಿಕ‌ ಇಲಾಖೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು‌ ಪ್ರಗತಿಪರಿಶೀಲನಾ ಸಭೆ ನಡೆಸಿದ್ದೇನೆ. ಅದರಂತೆ ಗದಗಿಗೂ ಬಂದು‌ ಸಭೆ ನಡೆಸಲಾಗಿದೆ ಎಂದರು.

ರಾಜ್ಯದ ದೇಶದ ಸಮಸ್ಯೆಗಳ ವಿಷಯಗಳಿಗೆ ಹೆಚ್ಚು ಆದ್ಯತೆ ಕೊಡಬೇಕೇ‌ ವಿನಃ ಸಚಿವ ಸಂಪುಟ‌ ಸರ್ಜರಿ‌ ಅದು-ಇದು ಎನ್ನುವ ವಿಷಯಕ್ಕೆ ಮಹತ್ವ ನೀಡಬಾರದು. ಜನರ ಸಮಸ್ಯೆಗಳಿಗಿಂತ‌‌ ಅಭಿವೃದ್ಧಿಗಿಂತ ಸಚಿವ ಸಂಪುಟದ ವಿಷಯವೇನಷ್ಟೂ ಮಹತ್ವದ್ದಲ್ಲ. ಮಹತ್ವದ ಜನರ ವಿಚಾರಗಳಿಗೆ ಗಮನ‌ ನೀಡಬೇಕು ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜಣ್ಣ ವಿಚಾರ ಅವರವರಿಗೆ ಬಿಟ್ಟಿದ್ದಾಗಿದೆ. ಯಾರೂ ಹೊಸ ಸಿಎಂ ವಿಚಾರವನ್ನು ತೇಲಿಬಿಟ್ಟಿದ್ದಾರೆಯೋ ಅವರನ್ನೇ ಸುದ್ದಿಗಾರರು ಪ್ರಶ್ನಿಸಬೇಕೇ ಹೊರತು ನನ್ನನ್ನಲ್ಲ. ನನಗೆ ಸಂಬಂಧವಿಲ್ಲದ ಅಥವಾ ತಿಳಿಯದೇ ಇರುವ ವಿಚಾರದ ಬಗ್ಗೆ ಮಾತನಾಡುವುದು‌ ಸೂಕ್ತವಲ್ಲ. ನಾನು‌ ಯಾರ ಪರವೂ ಅಲ್ಲ, ವಿರೋಧವೂ‌ ಅಲ್ಲ. ನಾನು‌ ಕಾಂಗ್ರೆಸ್ ಪಕ್ಷದ ಪರ ಎಂದು‌ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಂತೋಷ್ ಲಾಡ್ ಉತ್ತರಿಸಿದರು.

ಕುಂಭಮೇಳದಲ್ಲಿ ಎಷ್ಟೊಂದು ಜನರ ಸಾವಾಗಿದೆ. ಸಾವಿರಾರು ಜನರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ನೆರವಾಗುವಂತೆ ಸುದ್ದಿಗಾರರು ಕೇಂದ್ರವನ್ನು‌ ಪ್ರಶ್ನೆ ಮಾಡಬೇಕು ಎಂದರು.

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಶಾಸಕ ಡಾ. ಚಂದ್ರು ಲಮಾಣಿ ಹಾಗೂ‌ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕಾರ್ಮಿಕ ಇಲಾಖೆಯ ಆಯುಕ್ತ ಗೋಪಾಲಕೃಷ್ಣ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದ್ದರು.

ಹುಲಕೋಟಿಯಲ್ಲಿ ಕಾರ್ಮಿಕರ ಸಮುದಾಯ ಭವನ ಕಟ್ಟಡ ನಿರ್ಮಾಣದ ಶಿಲಾನ್ಯಾಸ

ಗದಗ: ತಾಲೂಕಿನ ಹುಲಕೋಟಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ ಸಹಯೋಗದಲ್ಲಿ ಕಾರ್ಮಿಕರ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶಿಲಾನ್ಯಾಸ ನೆರವೇರಿಸಿದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!