ಪ್ರಜಾಪಥ ವಾರ್ತೆ
ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಕೃಷ್ಣಾ ಪರಾಪೂರ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಮೂಲಕ 35 ಸದಸ್ಯ ಬಲದ ಗದಗ-ಬೆಟಗೇರಿ ನಗರಸಭೆಯಲ್ಲಿ 18 ಸದಸ್ಯ ಬಲವಿದ್ದ ಬಿಜೆಪಿ ಇದೀಗ ಮೂವರ ಅನರ್ಹತೆಯಿಂದ 15ಕ್ಕೆ ಕುಸಿದಿದೆ. ಸಂಸದ ಬಸವರಾಜ ಬೊಮ್ಮಾಯಿ ಸೇರಿ ಒಟ್ಟು 16 ಸದಸ್ಯರು ಮತದಾನ ಮಾಡಬಹುದು.
ಅತ್ತ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲದ ಜತೆಗೆ 17 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಸ್ಥಳೀಯ ಶಾಸಕರಾಗಿರುವ ಸಚಿವ ಎಚ್.ಕೆ. ಪಾಟೀಲ ಅವರ ಮತ ಸೇರಿ ಒಟ್ಟು 18 ಮತಗಳು ಕ್ರೋಢೀಕರಣವಾಗಲಿವೆ. ಈ ಮೂಲಕ ನಗರಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಹಾದಿ ಸುಗಮವಾಗಬಹುದು.
=
