ಗದಗ ಶಾಲಾವರಣದಲ್ಲಿ ಉರುಳಿದ ಮರದ ಟೊಂಗೆ-ತಪ್ಪಿದ ಅನಾಹುತ
ಪ್ರಜಾಪಥ ವಾರ್ತೆ
ಗದಗ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಣ್ಣಿನ ಮನೆಗಳಷ್ಟೇ ಅಲ್ಲ, ತೇವಾಂಶ ಹೆಚ್ಚಾಗಿ ಮರಗಳು, ಮರಗಳ ಟೊಂಗೆಗಳು ಸಹ ಧರೆಗುರುಳುತ್ತಿವೆ.
ನಗರದ ಮುಳಗುಂದ ರಸ್ತೆಯ ಹುಡ್ಕೋ ಎರಡನೇ ಕ್ರಾಸ್ ನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.15 ರ ಪ್ರವೇಶ ದ್ವಾರದ ಬಳಿ ರಸ್ತೆ ಮೇಲಿದ್ದ ಮರದ ಟೊಂಗೆಯೊಂದು ಶಾಲಾವರಣದಲ್ಲಿ ಮುರಿದು ಬಿದ್ದಿದೆ.
ಈ ವೇಳೆ ಶಾಲಾವರಣದಲ್ಲಿ ವಿದ್ಯಾರ್ಥಿಗಳಿರದೇ ತರಗತಿಯಲ್ಲಿ ಇರುವುದರಿಂದ ಯಾವುದೇ ಅನಾಹುತಗಳಾಗಿಲ್ಲ.
ಮರದ ಬೃಹತ್ ಟೊಂಗೆ ಶಾಲಾ ಕಂಪೌಂಡ್ ಗೆ ಧಕ್ಕೆ ಉಂಟು ಮಾಡಿದೆ.