ಗದಗ-ಬೆಟಗೇರಿಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆ-ಆವಾಂತರ ಸೃಷ್ಟಿ
ಹಲವೆಡೆ ಮನೆಗಳಿಗೆ ನುಗ್ಗಿದ ನೀರು-ಕೆರೆಯಂತಾದ ಅಂಗಳ
ಪ್ರಜಾಪಥ ವಾರ್ತೆ
ಗದಗ: ಬುಧವಾರ ಮಧ್ಯರಾತ್ರಿಯಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿ ಆಗಿದೆ.
ಒಂದು ಕಡೆ ಚರಂಡಿ ನೀರು ಮನೆಗೆ ನುಗ್ಗಿದರೇ, ಇನ್ನೊಂದು ಕಡೆ ರಾಜ ಕಾಲುವೆಯ ನೀರು ಮನೆಗಳಿಗೆ ನುಗ್ಗಿ ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರಲ್ಲಿ
.
ಗದಗದ ಗಂಗಿಮಡಿ, ಮುಳಗುಂದ ನಾಕಾದ ಕೆಇಬಿ ಬಳಿ ಹಾಗೂ ಬೆಟಗೇರಿಯ ನಾಲ್ಕನೇ ವಾರ್ಡ್ ನ ಮಂಜುನಾಥ್ ನಗರದ ವಾಲ್ಮೀಕಿ ಅಂಬೇಡ್ಕರ್ ಬಡಾವಣೆ ಹಾಗೂ ನರಸಾಪೂರ ಪೆಟ್ರೋಲ್ ಬಂಕ್ ಬಳಿಯ ಮನೆಗಳು ಜಲಾವೃತಗೊಂಡಿದ್ದು, ಮನೆಗಳಿಗೆಲ್ಲ ನೀರು ನುಗ್ಗಿದೆ.
ರಾತ್ರಿ ಮೂರು ಗಂಟೆ ಸಮಾರಿಗೆ ಮನೆಗಳಿಗೆ ಏಕಾಏಕಿ ನುಗ್ಗಿದ ರಾಜ ಕಾಲುವೆಯ ನೀರಿನಿಂದಾಗಿ ಗಾಬರಿಬಿದ್ದ ಜನ ನೀರು ಮನೆಯಿಂದ ಹೊರಗಡೆ ಹಾಕಲು ಹರಸಾಹಸ ನಡೆಸಿದರು. ಇದರಿಂದಾಗಿ ಜನ ಸಂಕಷ್ಟ ಎದುರಿಸುವಂತಾಯಿತು.
ಕಳೆದ ನಾಲ್ಕು ವರ್ಷಗಳ ಹಿಂದೆಯೂ ಇಡೀ ಬಡಾವಣೆಯಲ್ಲಿ ಮೊಳಕಾಲುದ್ದದ ನೀರು ನಿಂತು ಸ್ಥಳಿಯರು ಹೈರಾಣಾಗಿದ್ದರು. ಈಗ ಬುಧವಾರ ಸುರಿದ ಭಾರಿ ಮಳೆಗೆ ಸ್ಥಳೀಯರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.ನ
ಬೆಟಗೇರಿಯ ನರಸಾಪೂರ ಪೆಟ್ರೋಲ್ ಬಂಕ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
ಮಳೆಯ ನೀರು ಬಂದು ಸಂಕಷ್ಟದಲ್ಲಿರುವ ಜನತೆಗೆ ನಮ್ಮ ಶಿವರತ್ನ ಕಲ್ಯಾಣ ಮಂಟಪದಲ್ಲಿ ಆಶ್ರಯ ಒದಗಿಸಲು ಸ್ಥಳಾವಕಾಶ ಮಾಡಿದ್ದೇವೆ.-
ಶಿವಣ್ಣ ಮುಳಗುಂದ, ಮಾಜಿ ಅಧ್ಯಕ್ಷರು
ಗದಗ-ಬೆಟಗೇರಿ ನಗರಸಭೆ