ಗದಗ ಜಿಲ್ಲಾಧಿಕಾರಿ ಹುದ್ದೆಗೆ ದಿವ್ಯಾ ಪ್ರಭು
ರಾಜ್ಯ ಸರ್ಕಾರದಿಂದ ವರ್ಗಾವಣೆಗೊಳಿಸಿ ಆದೇಶ
ಪ್ರಜಾಪಥ ವಾರ್ತೆ
ಗದಗ: ಗದಗ ಜಿಲ್ಲಾಧಿಕಾರಿಯಾಗಿ ದಿವ್ಯಾ ಪ್ರಭು ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಂ. ಸುಂದರೇಶಬಾಬು ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ, ಶ್ರೀಮತಿ ಹೊನ್ನಾಂಬಾ ಅವರನ್ನು ನಿಯೋಜಿಸಿತ್ತು. ಆದರೆ, ಅವರು ಗದಗ ಜಿಲ್ಲೆಗೆ ಬಂದಿರಲಿಲ್ಲ.
ಇದೀಗ ರಾಜ್ಯ ಸರ್ಕಾರವು ಹುದ್ದೆ ನಿಯೋಜನೆ ನಿರೀಕ್ಷೆಯಲ್ಲಿದ್ದ ದಿವ್ಯಾ ಪ್ರಭು ಅವರಿಗೆ ಗದಗ ಜಿಲ್ಲಾಧಿಕಾರಿ ಹುದ್ದೆ ತೋರಿಸಿದೆ. ಇವರು 2014 ರ ಕರ್ನಾಟಕ ಕೇಡರ್ ಅಧಿಕಾರಿ.