ಗದಗ ಜಿಲ್ಲೆಯಲ್ಲೂ ಬಿಟ್ಟೂ ಬಿಡದೇ ಮಳೆ-ಜನಜೀವನ ಅಸ್ತವ್ಯಸ್ತ
ಪ್ರಜಾಪಥ ವಾರ್ತೆ
ಗದಗ: ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲೂ ಮೇಘ ಸ್ಫೋಟಗೊಂಡಂತಿದೆ.
ಬೆಳಗ್ಗೆಯಿಂದಲೇ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅವಳಿ ನಗರ ಗದಗ-ಬೆಟಗೇರಿ ಸೇರಿ ಜಿಲ್ಲೆಯ ತಗ್ಗುಪ್ರದೇಶದ ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ, ರಸ್ತೆಗಳೆಲ್ಲ ಕೆರೆಯಂತಾಗಿವೆ.
ಮಳೆಯಿಂದಾಗಿ ಜನ ಹೊರಬರದಂತಹ ವಾತಾವರಣ ನಿರ್ಮಾಣವಾಗಿದೆ. ಮಣ್ಣಿನ ಮನೆಗಳಲ್ಲಿ ವಾಸಿಸುವ ಜನ ಆತಂಕದಲ್ಲೇ ಹೊತ್ತು ಕಳೆಯುತ್ತಿದ್ದಾರೆ..