ಗದಗ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸ್ತಾರಾ? ಗದಗನಲ್ಲಿ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ಏನಿತ್ತು?

Spread the love

ಪ್ರಜಾಪಥ ವಾರ್ತೆ
ಗದಗ: ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಪ್ರಕಟಿಸಿದ ನಂತರವೂ ಬಂದ್ಗೆ ಕರೆ ನೀಡಿದರು. ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಪ್ರಕರಣಕ್ಕೆ ಪರೋಕ್ಷವಾಗಿ ಸಮ್ಮತಿಸಿದರು.
ಬುಧವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಧರ್ಮೀಯರು ಶಾಂತಿ, ಸಹಬಾಳ್ವೆ ಯಿಂದ ಬದುಕಬೇಕು ಎಂಬುದು ಎಲ್ಲರ ಅಪೇಕ್ಷೆ. ಆದರೆ, ಹೈಕೋರ್ಟ್ ತೀರ್ಪು ಬಳಿಕ ನಡೆಸಿದ ಕೆಲವರ ಚಟುವಟಿಕೆಗಳನ್ನು ಯಾ ರೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.


ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಗದುಗಿನಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಪಕ್ಷವು ಸದ್ಯಕ್ಕೆ ನನಗೆ ಸಂಘಟನೆ ಜವಾಬ್ದಾರಿ ಕೊಟ್ಟಿದೆ. ಪ್ರತಿ ಚುನಾವಣೆ ಬಂದಾಗಲೂ ನನ್ನ ಹೆಸರು ಕೇಳಿಬರುತ್ತದೆ. ಅದೇರೀತಿ, ಗದುಗಿ ನಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ ಯಷ್ಟೇ’. ಅವಕಾಶ ಇದ್ದಿದ್ದರೆ 224 ಕ್ಷೇತ್ರಗಳಲ್ಲೂ ನಿಲ್ಲಬಹುದಿತ್ತು. ಎಂದು ಹೇಳಿದರು.

ಬಳಿಕ ವಿಜಯೇಂದ್ರ ಅವರು ನಗರದ ಹುಬ್ಬಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರವ ಜಿಲ್ಲಾ ಬಿಜೆಪಿ ಕಚೇರಿ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶ್ರೀಪತಿ ಉಡುಪಿ, ಭೀಮಸಿಂಗ್ ರಾಠೋಡ, ರಾಜು ಕುರಡಗಿ, ನಾಮದೇವ ಚಿಕ್ಕಣ್ಣವರ, ಸುಧೀರ ಕಾಟೀಗಾರ, ಅಮರನಾಥ ಗಡಗಿ, ನಗರಸಭೆ ಸದಸ್ಯರಾದ ಮಾಧೂಸಾ ಮೇರವಾಡೆ ಸೇರಿ ಹಲವರು ಇದ್ದರು.

Leave a Reply

Your email address will not be published. Required fields are marked *