ಬೈಕ್ ಗೆ ಬಸ್ ಡಿಕ್ಕಿ-ಬಸ್ ಪಲ್ಟಿ- ಹಿಂಬದಿ ಸವಾರ ಸ್ಥಳದಲ್ಲೇ ಸಾವು
ಪ್ರಜಾಪಥ ವಾರ್ತೆ
ಗದಗ: ಸಾರಿಗೆ ಬಸ್ ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಂಬಳ ರಸ್ತೆಯಲ್ಲಿ ನಡೆದಿದೆ.
ಮೃತನನ್ನು ಹನಮಂತ ಎಂದು ಗುರುತಿಸಲಾಗಿದೆ. ಬಸ್ ವೊಂದನ್ನು ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಬಂದ ಸಾರಿಗೆ ಬಸ್ ಗೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ..
ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿದ್ದು, ಪ್ರಯಾಣಿಕರಿಗೆ ಗಾಯವಾಗಿದೆ ಎಂಬ ಮಾಹಿತಿ ಲಭಿಸಿದ್ದು, ಹೆಚ್ಚಿನವಿವರ ಸಿಗಬೇಕಿದೆ..