ಗದಗನಲ್ಲೂ ಪಿಎಫ್ ಐ ಕಾರ್ಯಕರ್ತರ ಮನೆ ಮೇಲೆ ದಾಳಿ-ಬಂಧಿತರು ಯಾರು?
ಪ್ರಜಾಪಥ ವಾರ್ತೆ
ಗದಗ: ರಾಜ್ಯಾದ್ಯಂತ ಪಿಎಫ್ ಐ ಸಂಘಟನೆ ಕಾರ್ಯಕರ್ತರ ಮನೆ ಮೇಲೆ ಪೊಲೀಸರ ದಾಳಿ ಹಾಗೂ ಬಂಧನ ಕಾರ್ಯ ನಡೆಯುತ್ತಿದ್ದು , ಗದಗನಲ್ಲೂ ಸಹ ಪಿಎಫ್ಐ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಇಂದು ನಡೆದಿದೆ.
ರಹಮತ್ ನಗರದ ನಿವಾಸಿಯಾದ ರುಸ್ತುಮ ಗೌಂಡಿ ಹಾಗೂ ಕಾಗದಗಾರ ಓಣಿ ನಿವಾಸಿಯಾದ ಸರ್ಪರಾಜ ದಂಡಿನ ಬಂಧಿತರು.
ಪೊಲೀಸ ಸಿಪಿಐ ಜಯಂತ ಗೌಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಠಾಣೆ ಗೆ ಕರೆ ತಂದು ವಿಚಾರಣೆ ನಡೆಸಿ, ಬಳಿಕ ತಾಲ್ಲೂಕಾ ದಂಡಾಧಿಕಾರಿಗಳೂ ಆಗಿರುವ ಗದಗ ತಹಶೀಲ್ದಾರ ಕಿಶನ್ ಕಲಾಲ ಮುಂದೆ ಹಾಜರ ಪಡಿಸಿದ್ದಾರೆ.
ಬಂಧಿತ ರುಸ್ತುಂ ಗೌಂಡಿ ಹಾಗೂ ಸರ್ಫರಾಜ್ ದಂಡಿನ್ ಅವರಿಗೆ ಅಕ್ಟೋಬರ್ 2 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಗದಗ ತಹಶಿಲ್ದಾರ ಕಿಶನ್ ಕಲಾಲ ಅವರು ಆದೇಶ ಮಾಡಿದ್ದಾರೆ.