ಮಳೆಯಿಂದ ಕೊಚ್ಚಿ ಹೋಗಿದ್ದ ನಾಗಾವಿ ಬಳಿಯ ರಸ್ತೆಯ ಕಂದಕಕ್ಕೆ ಬಿದ್ದ ಬೈಕ್-ಯುವಕರಿಬ್ಬರ ಸಾವು
ಪ್ರಜಾಪಥ ವಾರ್ತೆ
ಗದಗ: ಈಚೆಗೆ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋಗಿ, ರಸ್ತೆಯಲ್ಲಿ ನಿರ್ಮಾಣವಾಗಿದ್ದ ನಾಗಾವಿ ಬಳಿಯ ದೊಡ್ಡ ಕಂದಕಕ್ಜೆ ಬೈಕ್ ಒಂದು ಬಿದ್ದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಲಕ್ಕುಂಡಿ ಗ್ರಾಮದ ಮಂಜುನಾಥ್ ಮಾದರ (19) ಹಾಗೂ ಬಸವರಾಜ್ ಜವಳಬೆಂಚಿ (17) ಎಂದು ಗುರುತಿಸಿಲಾಗಿದೆ.
ಗದಗ ತಾಲ್ಲೂಕಿನ ನಾಗಾವಿ ಗ್ರಾಮದ ನಾಗಾವಿ ತಾಂಡಾದ ಮಧ್ಯ ಹೊರವಲಯದಲ್ಲಿ ರಸ್ತೆ ಮಧ್ಯದ ಕಂದಕದಲ್ಲ ಬಿದ್ದು ಇಬ್ಬರೂ ಯುವಕರು ಮೃತ ಪಟ್ಟಿದ್ದಾರೆ.
ಲಕ್ಕುಂಡಿ ಗ್ರಾಮದಿಂದ ಎಲಿಸಿರುಂದ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿ ಇಬ್ಬರೂ ಕಂದಕದಲ್ಲ ಬಿದ್ದು ಮೃತ ಪಟ್ಟಿದ್ದಾರೆ