ಗದಗನಲ್ಲಿ ಹಾಡು-ಹಗಲೇ ಮಹಿಳೆಗೆ ಚಾಕು ಇರಿದು ಕೊಲೆ-ಕೊಲೆಯಾದವಳು ಯಾರು?
ಪ್ರಜಾಪಥ ವಾರ್ತೆ
ಗದಗ: ಮಹಿಳೆಯೊಬ್ಬರನ್ನು ಹಾಡುಹಗಲೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ನಗರದ ಮುಳಗುಂದ ನಾಕಾ ಬಳಿ ಜರುಗಿದೆ.
ನಗರದ ನಿವಾಸಿ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ (28) ಮೃತಪಟ್ಟ ಮಹಿಳೆ.
ಘಟನೆ ವಿಷಯ ತಿಳಿದ ಕೂಡಲೇ ಎಸ್ಪಿ ಶಿವಪ್ರಕಾಶ ದೇವರಾಜು, ಸಿಪಿಐ ಜಯಂತ ಗೌಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗದಗ ನಗರದಲ್ಲಿ 2020ರಲ್ಲಿ ಅಟೋ ಚಾಲಕ ರಮೇಶ ಎಂಬುವವನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ, ವಸೀಂ ಬೇಪಾರಿ ಆರೋಪಿಗಳಾಗಿದ್ದರು.
ಸದ್ಯ ಅವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಈ ಕುರಿತು ವಿಚಾರಣೆಗಾಗಿ ನಗರದ ಶೋಭಾ ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ಗೊತ್ತಾಗಿದೆ. ಸೋಮವಾರ ಮಧ್ಯಾಹ್ನ ಮುಳಗುಂದ ನಾಕಾ ಬಳಿಯಲ್ಲಿರುವ ಬೇಕರಿಗೆ ತೆರಳಿದ್ದ ಸಮಯದಲ್ಲಿ ಏಕಾಏಕಿ ಇಬ್ಬರು ಶೋಭಾ ಬಂದು (ಮೀನಾಜ್) ಅವರ ಮೇಲೆ ದಾಲಿ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಕುರಿತ ವಿಚಾರಣೆ ಮುಂದುವರಿದಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಎಸ್.ಎಂ.ಕೃಷ್ಣ ನಗರ ನಿವಾಸಿಗಳಾದ ಚೇತನಕುಮಾರ ಹುಳಕಣ್ಣವರ, ರೋಹನ್ ಕುಮಾರ ಹುಳಕಣ್ಣವರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
– ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ