ಗದಗನಲ್ಲಿ ಹೃದಯ ರೋಗ, ನರರೋಗ, ಕ್ಯಾನ್ಸರ್, ಕಿಡ್ನಿ ಸ್ಟೋನ್ ಉಚಿತ ತಪಾಸಣೆ ಇಂದು

Spread the love

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 47 ನೇ ಜನ್ಮದಿನದ ನಿಮಿತ್ತ ಆಯೋಜನೆ

 

ಪ್ರಜಾಪಥ ವಾರ್ತೆ
ಗದಗ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 47 ನೇ ಜನ್ಮದಿನದ ನಿಮಿತ್ತ ನ.4 ರಂದು ಶುಕ್ರವಾರ ನಗರದ ವೀರನಾರಾಯಣ ದೇವಸ್ಥಾನ ರಸ್ತೆಯ ಶ್ರೀ ಪೇಟೆ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಉಚಿತ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಕಲ್ಲು ಕಾಯಿಲೆ ಸೇರಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಸುಧೀರ ಕಾಟೀಗರ ಹೇಳಿದರು.


ಗುರುವಾರ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತೀಯ ಜನತಾ ಪಾರ್ಟಿ ಗದಗ ನಗರ ಮಂಡಳ, ಶ್ರೀ ಪೇಟೆ ವೀರಭದ್ರೇಶ್ವರ ಯುವಕ ಮಂಡಳ ಹಾಗೂ ಮಹಿಳಾ ಮಂಡಳ, ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ಗೋಕುಲ ಫೌಂಡೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಕಾರದೊಂದಿಗೆ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 3 ರವರೆಗೆ ಈ ಶಿಬಿರ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಚಾಲನೆ ನೀಡುವರು. ಯುವ ಮುಖಂಡ ಉಮೇಶಗೌಡ ಪಾಟೀಲ ಸೇರಿ ಹಲವರು ಭಾಗವಹಿಸಲಿದ್ದಾರೆ.


ಕೋವಿಡ್ ಕಾಲದಲ್ಲಿ ಬಿ.ವೈ. ವಿಜಯೇಂದ್ರ ಅವರು ಅಗತ್ಯವಿದ್ದವರಿಗೆ ಅಂಬ್ಯುಲೆನ್ಸ್ ವ್ಯವಸ್ಥೆ, ಮನೆ-ಮನೆಗೆ ತೆರಳಿ ಔಷಧಿ ವಿತರಣೆ ಸೇರಿ ಹಲವು ಕಾರ್ಯಗಳನ್ನು ಮಾಡಿದ್ದಾರೆ. ನ.5 ರಂದು ನಡೆಯುವ ಅವರ ಜನ್ಮದಿನದ ಮುನ್ನಾ ದಿನ ಗದಗನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಹೇಳಿದರು.
ನಗರಸಭೆ ಆಡಳಿತ ಪಕ್ಷದ ನಾಯಕ ವಿನಾಯಕ ಮಾನ್ವಿ ಅವರು ಮಾತನಾಡಿ, ಈ ಶಿಬಿರದಲ್ಲಿ ತಪಾಸಣೆಗೆ ಆಗಮಿಸುವ ಜನರು ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ತಂದರೆ ಅಗತ್ಯವಿರುವವರಿಗೆ ಶಸ್ತçಚಿಕಿತ್ಸೆಯೂ ಉಚಿತವಾಗಿ ಸಿಗಲಿದೆ. ಎಪಿಎಲ್ ಕಾರ್ಡ್ನವರಿಗೆ ರಿಯಾಯ್ತಿ ಇರಲಿದೆ. ಇದರೊಂದಿಗೆ ಬಿಪಿ, ಶುಗರ್ ತಪಾಸಣೆ ಸಾಮಾನ್ಯವಾಗಿ ಇರಲಿದೆ ಎಂದು ಹೇಳಿದರು.
ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಡಾ.ಸುಭಾಸ ಶಿವನಗೌಡರ ಅವರು ಮಾತನಾಡಿ, ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರು, ಗದಗ ಜಿಲ್ಲೆಯ ವೈದ್ಯರು ಇರಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗದಗ-ಬೆಟಗೇರಿ ನಗರಸಭೆ ಹೈಸ್ಕೂಲ್ ಕಮೀಟಿ ಚೇರಮನ್ ಮಹಾಂತೇಶ ನಲವಡಿ, ಗದಗ ಶಹರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷಿö್ಮ ಮಾನ್ವಿ, ನಗರಸಭೆ ಸದಸ್ಯ ನಾಗರಾಜ ತಳವಾರ, ಮುಖಂಡರಾದ ವಿನಾಯಕ ಹಬೀಬ, ವೆಂಕಟೇಶ ಹಬೀಬ, ಈಶ್ವರ ಕೋಟಿ, ವಾದಿರಾಜ ಹರಿಬಲ, ಸುರೇಶ ಚಿತ್ತರಗಿ ಸೇರಿ ಅನೇಕರು ಇದ್ದರು.

ಶಿಬಿರದಲ್ಲಿ ತಪಾಸಣೆಗೆ ಒಳಗಾಗಿ, ಶಸ್ತçಚಿಕಿತ್ಸೆ ಅಗತ್ಯವಿದ್ದವರಿಗೆ ಬೆಂಗಳೂರಿನಲ್ಲಿ ಉಚಿತವಾಗಿ ನಡೆಯಲಿದೆ. ಅಲ್ಲದೇ, ಅವರಿಗೆ ಹೋಗಿ, ಬರಲು ಪ್ರಯಾಣದ ವ್ಯವಸ್ಥೆ ಕೂಡ ಆಸ್ಪತ್ರೆಯಿಂದಲೇ ಮಾಡಲಾಗುವುದು.
-ವಿನಾಯಕ ಮಾನ್ವಿ, ನಗರಸಭೆ ಆಡಳಿತ ಪಕ್ಷದ ನಾಯಕ

Leave a Reply

Your email address will not be published. Required fields are marked *