ಹುಯಿಲಗೋಳ ಬಳಿ ಸಾರಿಗೆ ಬಸ್ ಪಲ್ಟಿ-ಹಲವರಿಗೆ ಗಂಭೀರ ಗಾಯ
- ಹಿರೇಕೊಪ್ಪ-ಹುಯಿಲಗೋಳ ಮಧ್ಯೆ ಘಟನೆ
ಪ್ರಜಾಪಥ ವಾರ್ತೆ
ಗದಗ: ಸಾರಿಗೆ ಸಂಸ್ಥೆಯ ಬಸ್ ವೊಂದು ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹುಯಿಲಗೋಳ ಬಳಿ ನಡೆದಿದೆ.
ಗದಗನಿಂದ ಬಳಗಾನೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಿರೇಕೊಪ್ಪ ದಾಟಿದ ಬಳಿಕ ‘ಒರ್ತಿ ಹಳ್ಳ’ದ ಬಳಿ ಮುಗುಚಿ ಬಿದ್ದಿದೆ.
ಬಸ್ ನಲ್ಲಿ 50 ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದು ಎನ್ನಲಾಗಿದೆ. ಕೆಲವರಿಗೆ ಗಂಭೀರವಾದ ಗಾಯಗಳಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ. ಅವಘಡಕ್ಕೆ ಕಾರಣ ತಿಳಿದು ಬರಬೇಕಿದೆ.