ಗದಗನ 33ನೇ ವಾರ್ಡ್ ನ ಪುರಾತನ ಬಾವಿ ಮುಚ್ಚಿ ಪ್ಲಾಟ್ ನಿರ್ಮಾಣ
ಬಾವಿ ಜೀರ್ಣೋದ್ಧಾರಕ್ಕೆ ನಗರಸಭೆ ಅಧ್ಯಕ್ಷರಿಗೆ ಸ್ನೇಹ ಬಳಗದಿಂದ ಮನವಿ
ಪ್ರಜಾಪಥ ವಾರ್ತೆ
ಗದಗ: ಸ್ಥಳೀಯ 33ನೇ ವಾರ್ಡಿ ನಲ್ಲಿರುವ ವೀರೇಶ್ವರ ನಗರದ ಪಟ್ಟಣ ಶೆಟ್ಟಿ ಲೇಔಟ್ನಲ್ಲಿರುವ ಬಾವಿಯು 180-200 ವರ್ಷದ ಹಳೆ ಯದು. ಅದಕ್ಕೆ ನಗರಸಭೆ ಯಿಂದಲೇ ಜೀರ್ಣೋದ್ಧಾರ ಮೂಲಕ ಅಂತ ರ್ಜಲ ಸಂರಕ್ಷಣೆಗೆ ಮುಂದಾ ಗುವಂತೆ ಸ್ನೇಹ ಬಳಗ ಒತ್ತಾಯಿಸಿದೆ.
ಈ ಕುರಿತು ಸ್ನೇಹ ಬಳಗದ ಜಿಲ್ಲಾಧ್ಯಕ್ಷ ಬಾಬು ಎನ್ ಶಿದ್ಲಿಂಗ ಅವರ ನೇತೃತ್ವದಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ರಿಂಗ್ ರೋಡ ಹತ್ತಿರುವ ಪಟ್ಟಣಶೆಟ್ಟಿ ಲೇಔಟ್ ಅವೈಜ್ಞಾನಿಕ ವಾಗಿದ್ದು, ಬಾವಿಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡದೇ ಪ್ಲಾಟಗಳನ್ನಾಗಿ ನಿರ್ಮಾಣ ಮಾಡಿ ದ್ದಾರೆ. ರಿ.ಸ.ನಂ. 295 ರಲ್ಲಿರುವ ಈ ಬಾವಿಯನ್ನು ಕೆಲವರು ಒಡೆದು ಮುಚ್ಚಲು ಮುಂದಾಗಿದ್ದಾರೆ. ಆದರೆ ಈ ಭಾಗದ ಸಾರ್ವಜನಿಕರಿಗೆ ಈ ಬಾವಿಯು ನೀರಿನ ಮೂಲವಾಗಿದ್ದು, ಅಂತರ್ಜಲ ಹೆಚ್ಚಾಗಿದ್ದರಿಂದ ಇಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಮನೆಗಳ ಬೋರ್ವೆಲ್ಗಳಿಗೆ ಉತ್ತಮವಾಗಿ ನೀರು ಬರುತ್ತಿದೆ.
ಸರ್ಕಾರವು ನೀರಿನ ಅಂತರ್ಜ ಲವನ್ನು ಹೆಚ್ಚಿಸಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಪ್ರಚಾರ ಮಾಡುತ್ತಿದೆ. ಅಂತಹದರಲ್ಲಿ ಇಂತಹ 200 ವರ್ಷ ಕಾಲದ ನೀರು ಇರುವ ಬಾವಿಯನ್ನು ಮುಚ್ಚಲು ಮುಂದಾಗಿರುವುದು ಬೇಸರದ ಸಂಗತಿ. ಬಾವಿಯನ್ನು ಮುಚ್ಚಿ ಪ್ಲಾಟ ಮಾಡಿ ಮನೆ ಕಟ್ಟುವುದು ಸಹ ಅಪಾಯಕಾರಿ ಎಂಬುದನ್ನು ತಜ್ಞರ ಅಭಿಪ್ರಾಯ ಸಹ ಇದೆ. ಕಾರಣ ನಗರಸಭೆಯಿಂದಲೇ ಈ ಬಾವಿಯನ್ನು ಜೀರ್ಣೋದ್ಧಾರ ಗೊಳಿ ಸಲು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.
ಸ್ನೇಹ ಬಳಗದ ಗಜಾನನ ಹಬೀಬ, ಸಂತೋಷ ಶೆಟ್ಟಿಕೇರಿ, ರವಿ ಮಡಿವಾಳರ ಉಪಸ್ಥಿತರಿದ್ದರು.