ಗದಗ-ಬೆಟಗೇರಿಯಲ್ಲಿ ‘ರನ್ ಫಾರ್ ವಿನ್’ ನಾಳೆ
ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿಯಿಂದ ಮ್ಯಾರಾಥಾನ್’
ಪ್ರಜಾಪಥ ವಾರ್ತೆ
ಗದಗ: ಸ್ಥಳೀಯ ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿಯಿಂದ ಬಿಜೆಪಿ ಯುವ ಮುಖಂಡ ಅನೀಲ ಮೆಣಸಿನಕಾಯಿ ಅವರ ನೇತೃತ್ವದ ಅವಳಿ ನಗರ ಗದಗ-ಬೆಟಗೇರಿಯಲ್ಲಿ ನ. 27ರಂದು ರವಿವಾರ ‘ರನ್ ಫಾರ್ ವಿನ್’ ಅಡಿ ಬೃಹತ್ ‘ಮ್ಯಾರಥಾನ್’(ಗೆಲುವಿಗಾಗಿ ಓಡಿ) ಆಯೋಜಿಸಲಾಗಿದೆ.
ರವಿವಾರ ಬೆಳಗ್ಗೆ 7 ಗಂಟೆಗೆ ನಗರದ ಕಳಸಾಪೂರ ರಸ್ತೆಯ ರಾಮನಗರದ ಪಾಂಡುರಂಗ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ, ಕ್ರಿಕೆಟ್ ಆಟಗಾರ ಎಚ್.ಎಸ್.ಶರತ್ ಹಾಗೂ ಕಿರುತೆರೆ ನಟ ದೀಪಕ ಗೌಡ ಅವರು ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ.
ರಿಂಗ್ ರಸ್ತೆ ವೃತ್ತದಿಂದ ಆರಂಭ ವಾಗುವ ಮ್ಯಾರಥಾನ್ ಬಸವೇಶ್ವರ ಶಾಲೆಯ ಹಿಂಭಾಗದ ರಸ್ತೆ, ಹುಡ್ಕೋದ ಅಂಬಾಭವಾನಿ ದೇವಸ್ಥಾನ, ವೀರೇಶ್ವರ ನಗರ, ಮುಳಗುಂದ ನಾಕಾ, ಚನ್ನಮ್ಮ ವೃತ್ತ, ಬನ್ನಿಕಟ್ಟಿಯಿಂದ ತ್ರಿಕೂಟೇಶ್ವರ ದೇವಸ್ಥಾನ, ಜೋಡಮಾರುತಿ ದೇವಸ್ಥಾನ, ಒಕ್ಕಲಗೇರಿಯ ಶ್ರೀ ರಾಚೋಟೇಶ್ವರ ದೇವಸ್ಥಾನ, ಗಂಜಿ ಬಸವೇಶ್ವರ ವೃತ್ತ, ಹನು ಮಾನ ಗರಡಿ ಮೂಲಕ ಶ್ರೀ ವೀರ ನಾರಾಯಣ ದೇವಸ್ಥಾನದ ಮುಂಭಾಗ, ವಿಎನ್‌ಟಿ ರಸ್ತೆ, ಚವಡಿ ರಸ್ತೆ, ಹಳೇ ಸರಾಫ ಬಜಾರ, ಅಂಬಾಭವಾನಿ ದೇವಸ್ಥಾನದ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಟಾಂಗಾಕೂಟ, ಮಹೇಂದ್ರಕರ ವೃತ್ತ, ಜೆಟಿ ಮಠ ರಸ್ತೆ, ಕಲಾಮಂದಿರ ರಸ್ತೆ, ವೀರೇಶ್ವರ ಪುಣ್ಯಾಶ್ರಮ, ಪಂಚಾಕ್ಷರಿ ನಗರ, ಹಾಲಕೆರೆಮಠ, ರಾಜೀವಗಾಂಧಿ ನಗರ, ಸಾಯಿಬಾಬಾ ಮಂದಿರ, ರಾಘ ವೇಂದ್ರಮಠ, ಹಾತಲಗೇರಿ ನಾಕಾ, ಜೆಟಿ ಕಾಲೇಜ್, ಚೇತನಾ ಕ್ಯಾಂಟೀನ್, ಟ್ಯಾಗೋರ್ ರಸ್ತೆ, ಗಾಂಧಿ ವೃತ್ತ, ಬಸವೇಶ್ವರ ನಗರ, ಡಿಸಿ ಮಿಲ್ ರಸ್ತೆ, ಜವುಳಗಲ್ಲಿ, ಹೊಂಬಳ ನಾಕಾ, ಎಸ್.ಎಂ.ಕೆ. ನಗರ, ಸೆಟ್ಲಮೆಂಟ್, ಹೆಲ್ತ್ ಕ್ಯಾಂಪ್, ನೀಲಕಂಠೇಶ್ವರ ಮಠ, ಕುರಟ್ಟಿ ಪೇಟೆ, ಗಾರ್ಗಿಪೇಟೆ, ಶರಣ ಬಸವೇಶ್ವರ ದೇವಸ್ಥಾನ, ಹೊಸಪೇಟೆ ಚೌಕ, ಗಾಂಧಿ ಚೌಕ, ಸುಭಾಸರಸ್ತೆ, ರಾಮಮಂದಿರ, ನೇಕಾರ ಕಾಲೋನಿ, ನರಸಾಪೂರ ಮೂಲಕ ರಂಗಪ್ಪನಮಠಕ್ಕೆ ತಲುಪಿ ಮ್ಯಾರಥಾನ್ ಸಮಾಪ್ತಿಗೊಳ್ಳಲಿದೆ.
ಕಳಸಾಪೂರರಿಂಗ್ ರಸ್ತೆಯಿಂದ ಬೆಟಗೇರಿ ರಂಗಪ್ಪಜ್ಜನಮಠದವರೆಗೆ ಒಟ್ಟು 27 ಕಿಮೀ ಉದ್ದದ ಮ್ಯಾರಥಾನ್ ಇದಾಗಿದ್ದು, ಉತ್ತರ ಕರ್ನಾಟಕದಲ್ಲಿ ಇಷ್ಟೊಂದು ಉದ್ದದ ಮ್ಯಾರಾಥಾನ್ ಇದೇ ಮೊದಲ ಎನ್ನಲಾಗಿದೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಗದಗ ಸ್ಪೋಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ 15ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಚಟುವಟಿಕೆ ಸಲುವಾಗಿ ಸಾಹಿತ್ಯ ಸಿಂಚನ ಎಂಬ ವಿನೂತನ ಕಾರ್ಯಕ್ರಮವನ್ನೂ ಏರ್ಪಡಿಸಲಾಗುತ್ತಿದೆ. ಗದಗ ಹಬ್ಬ ಹಾಗೂ ಗ್ರಾಮೀಣ ಹಬ್ಬವನ್ನೂ ಆಯೋಜಿಸಲಾಗುತ್ತಿದೆ. ಈ ಎಲ್ಲ ಕಾಯಕ್ರಮಗಳನ್ನು ಜನರಿಗೆ ಪರಿಚಯಿಸಲು ಮ್ಯಾರಥಾನ್ ನಡಿಗೆ ಕ್ರೀಡಾಜ್ಯೋತಿ ಮೂಲಕ ಜನರ ಮನೆ ಮನ ತಲುಪುವ ಕಾರ್ಯ ಇದಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂದು ಅಗಾಧವಾದ ಸ್ಪರ್ಧೆ ಇರುವುದರಿಂದ ಗೆಲುವಿಗಾಗಿ ಓಡಬೇಕು ಎಂಬ ಉದ್ದೇಶದೊಂದಿಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.
-ಅನೀಲ ಮೆಣಸಿನಕಾಯಿ, ಸಂಸ್ಥಾಪಕ ಅಧ್ಯಕ್ಷ, ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ