Prajapath

ಮುಖ್ಯಾಂಶಗಳು

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ.ಬಿ. ಪಾಟೀಲಗೆ ಲೋಕಾಯುಕ್ತ ಶಾಕ್

ಗದಗನ ಶಿವಾನಂದ ನಗರದಲ್ಲಿರುವ ಸಿಪಿಐ ಡಿ.ಬಿ. ಪಾಟೀಲರ ಮನೆ ಶೋಧ
Spread the love

ಗದಗ ಶಹರ ಠಾಣೆ, ಗದುಗಿನ ಶಿವಾನಂದ ನಗರದಲ್ಲಿರುವ ಮನೆ ಪರಿಶೀಲನೆ
ಸಿಪಿಐ ಡಿ.ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳ ಮೇಲೂ ದಾಳಿ

ಪ್ರಜಾಪಥ ವಾರ್ತೆ
ಗದಗ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗದಗ ಶಹರ ಪೊಲೀಸ್ ಠಾಣೆಯ ಸಿಪಿಐಗೆ ಲೋಕಾಯುಕ್ತ ಪೊಲೀಸರು ಮಂಗಳವಾರ ಗೆ ಶಾಕ್ ಕೊಟ್ಟಿದ್ದಾರೆ.

Oplus_16777216


ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಡಿ.ಬಿ. ಪಾಟೀಲ ಮನೆ ಸೇರಿ ಹಲವೆಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

Oplus_16777216


ಠಾಣೆಯಲ್ಲೂ ಪರಿಶೀಲನೆ: ಪೊಲೀಸ್ ಇನ್ಸಪೆಕ್ಟರ್ ಡಿ.ಬಿ. ಪಾಟೀಲ ಅವರು ಕಾರ್ಯ ನಿರ್ವಹಿಸುತ್ತಿದ್ದ ಗದಗ ಶಹರ ಠಾಣೆ. ಶಿವಾನಂದ ನಗರದಲ್ಲಿರುವ ಮನೆ ಹಾಗೂ ಸಿಪಿಐ ಡಿ.ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರ ಮನೆ ಸೇರಿ ಸಿಪಿಐ ಡಿ.ಬಿ. ಪಾಟೀಲಗೆ ಸೇರಿದ ಏಳು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ.ಎಸ್ ಪಾಟೀಲ, ಸಿಪಿಐ ಪರಶುರಾಮ್ ಕವಟಗಿ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಅನೇಕ ದಾಖಲೆಗಳು ಕಡತಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ದಾಳಿ ವೇಳೆ ಸಿಕ್ಕ ಮಾಹಿತಿ, ದಾಖಲೆಗಳ ಕುರಿತು ಲೋಕಾಯುಕ್ತ ಪಲೋಸರೇ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!