ಗದಗನಲ್ಲಿ ಚಾಕು ಇರಿತ ಪ್ರಕರಣ ಹೆಚ್ಚಳ ಹಿನ್ನಲೆ: ಅನುಮಾನಾಸ್ಪದ ವ್ಯಕ್ತಿಗಳ ಮನೆ ಶೋಧಿಸಿದ ಪೊಲೀಸರು-ಯಾವ ಪ್ರದೇಶದಲ್ಲಿ ದಾಳಿ, ಸಿಕ್ಕಿದ್ದೇನು?

Spread the love

 

ಪ್ರಜಾಪಥ ವಾರ್ತೆ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಚಾಕು ಇರಿತ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಲರ್ಟ ಆಗಿರುವ ಪೊಲೀಸ್ ಇಲಾಖೆ ಅಖಾಡಕ್ಕಿಳಿದಿದೆ.

ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ  ಶುಕ್ರವಾರ ನಗರದ ವಿವಿಧೆಡೆ ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಮಾರಕಾಸ್ತ್ರಗಳ ಪರಿಶೀಲನೆ ನಡೆಸಿದರು.

ಕುಲುಮೆಗಳೇ ಇರುವ ನಗರದ ಕಮ್ಮಾರಸಾಲು, ರಂಗನವಾಡ, ತೆಗ್ಗಿನ ಪ್ಲಾಟ್ ಸೇರಿ ಹಲವು ಪ್ರದೇಶಗಳಲ್ಲಿನ ಕೆಲ ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಮಾರಕಾಸ್ತ್ರಗಳನ್ನು ಪರಿಶೀಲಿಸಿದರು.

ನಗರದಲ್ಲಿ ಕಳೆದೊಂದು ವಾರದಲ್ಲಿ ಎರಡು ಪ್ರದೇಶಗಳಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ಗಾಯಗೊಂಡಿದ್ದರು. ಐದಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ಮಹಿಳಾ ಪಿಎಸ್ ಐ ಮುಂಡೇವಾಡಿ ಸೇರಿ ಹಲವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *