ಗದುಗಿಗೆ ಗಾಲಿ ಜನಾರ್ಧನ ರೆಡ್ಡಿ-ಎಲ್ಲೆಲ್ಲಿ ಭೇಟಿ-ರಾಜಕೀಯ ಕುರಿತು ಹೇಳಿದ್ದೇನು?
ಪ್ರಜಾಪಥ ವಾರ್ತೆ
ಗದಗ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದರು.
ಬ
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ ಪಂಚಾಕ್ಷರಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆ ದರ್ಶನ ಪಡೆದರು. ಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು.
ನಂತರ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಕೆಲ ನಿಮಿಷಗಳ ಕಾಲ ರಾಜಕೀಯ ಜೀವನದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಶ್ರೀಗಳು ಗಾಲಿ ಜನಾರ್ದನ ರೆಡ್ಡಿ ಅವರನ್ನು ಸನ್ಮಾನಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದಾರೂಢರ ಮಠಕ್ಕೆ ಶುಭ ಸೋಮವಾರ ಬಂದಿದ್ದೆನೆ. ನನ್ನ ಭವಿಷ್ಯದ ರಾಜಕೀಯ ಹಾಗೂ ಖಾಸಗಿ ಜೀವನ ರೂಪಿಸಲು ಆರ್ಶಿವಾದ ಪಡೆಯಲು ಬಂದಿದ್ದೆನೆ. ಸಿದ್ದಾರೂಢರ ಜೋಳಿಗೆ ಜಗಕೆಲ್ಲಾ ಹೋಳಿಗೆ ಎಂಬ ವಾಣಿ ಇದೆ. ಶ್ರೀಗಳ ಬಳಿ ಅದೇನು ಬೇಡಿಕೊಂಡೆ ಎಂಬುದನ್ನು ಮುಂದೆ ನಾನು, ಬೆಂಗಳೂರಿನಲ್ಲಿ ಹೇಳ್ತೆನಿ. ಚುನಾವಣೆಗೆ ಗಂಗಾವತಿಯಿಂದ ಸ್ಪರ್ಧೆ ಮಾಡ್ತೆನಿ. ಯಾಕೆಂದ್ರೆ ಪದೆ ಪದೆ ಬೆಂಗಳೂರು ನಿಂದ ಬರಲು ಆಗೊಲ್ಲ. ಬಳ್ಳಾರಿ ಯಿಂದ ಹೊರಗಡೆ ಬಂದಾಗ ಸಮೀಪ ಇರುವ ಕ್ಷೇತ್ರ ಗಂಗಾವತಿ. ಹೀಗಾಗಿ ಗಂಗಾವತಿಯಿಂದ ಸ್ಪರ್ಧೆ ಮಾಡ್ತೆನಿ. ಅದು ಶ್ರೀ ಆಂಜನೇಯನ ಪುಣ್ಯ ಸ್ಥಳ. ನಾವು ಚಿಕ್ಕವರಿದ್ದಾಗ ಕುಟುಂಬ ಸಮೇತ ಓಡಾಡಿದ ಸ್ಥಳವದು ಎಂದ್ರು. ಇನ್ನು ತಮ್ಮ ಹೊಸ ಪಕ್ಷ ವಿಷಯವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ನಾನು ದೇವರ ದರ್ಶನಕ್ಕೆ ಬಂದೆನಿ. ರಾಜಕೀಯ ವಿಷಯ ಈ ಸಮಯದಲ್ಲಿ ಮಾತನಾಡುವುದು ಬೇಡ. ಮಠಕ್ಕೆ ಬಂದಾಗ ರಾಜಕೀಯ ಚರ್ಚೆ ಬೇಡ ಎಂದ ಜನಾರ್ದನ ರೆಡ್ಡಿ ಹೇಳಿದರು.
ಎಸ್.ಎಚ್. ಶಿವನಗೌಡ್ರ ಜತೆಗಿದ್ದರು..