ಮಾ.31ಕ್ಕೆ ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಸನ್ಮಾನ
ಪ್ರಜಾಪಥ ವಾರ್ತೆ
ಗದಗ: ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾ ಶಾಖೆಯ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಸಮಾರಂಭ ಮಾ.31 ರಂದು ಗುರುವಾರ ಸಂಜೆ 5 ಗಂಟೆಗೆ ನಗರದ ರಿಂಗ್ ರೋಡ್ದಲ್ಲಿರುವ ಟಿಪ್ಪುಸುಲ್ತಾನ ವೃತ್ತದ ಬಳಿಯ ಕರ್ನಾಟಕ ಭವನದಲ್ಲಿ ನಡೆಯಲಿದೆ.
ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು, ಜಮಾತೆ ಉಲಮಾ ಹಿಂದ್ ಗದಗ ಜಿಲ್ಲಾಧ್ಯಕ್ಷ ಮೌಲಾನಾ ಇನಾಯತ್ವುಲ್ಲಾ ಪೀರಜಾದೆ ಹಾಗೂ ನರೇಗಲ್ಲನ ಸದಮಲ್ಸ್ವಾಮಿ ಬೇತೆಲ್ ಪ್ರಾರ್ಥನಾಲಯದ ಪಾಸ್ಟರ್ ಅಂದಾನಸ್ವಾಮಿ ಕಳಕಯ್ಯ ಮಾಲಗಿತ್ತಿಮಠ ಸಾನಿಧ್ಯವಹಿಸುವರು.
ಭಾರತೀಯರ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಎಂ. ರಾಮಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರಿವಪ್ರಕಾಶ ದೇವರಾಜು, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಡಿಜಿಎಂ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಉಮೇಶ ಪುರದ, ಜಿಲ್ಲಾ ಅಗ್ನಿಶಾಮಕ ಇಲಾಖೆ ಅಧಿಕಾರಿ ಎನ್.ಎಸ್. ಕಗ್ಗಲಗೌಡರ, ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಮುನಿಮಾರಪ್ಪ, ರಾಜ್ಯ ಉಪಾಧ್ಯಕ್ಷ ಮುನಿರಾಜು, ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಜೆ.ಯತೀಶಗೌಡ್ರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಗದಗ ಐಎಂಎ ಅಧ್ಯಕ್ಷ ಡಾ.ಪ್ಯಾರ್ ಅಲಿ ನೂರಾನಿ, ರೆಡ್ ಕ್ರಾಸ್ ಸಂಸ್ಥೆ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಎಂ.ಡಿ. ಸಮುದ್ರಿ, ಗದಗ-ಬೆಟಗೇರಿ ರೋಟರಿ ವೆಲ್ಫೇರ್ ಅಧ್ಯಕ್ಷ ಶ್ರೀಧರ ಸುಲ್ತಾನಪೂರ, ಜಿಮ್ಸ್ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಜಿ.ಎಸ್. ಪಲ್ಲೇದ, ವೈದ್ಯಕೀಯ ಅಧೀಕ್ಷಕ ಡಾ.ರಾಜಶೇಖರ ಮ್ಯಾಗೇರಿ, ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ, ಗೃಹ ರಕ್ಷದಳದ ಜಿಲ್ಲಾ ಸಮಾದೇಷ್ಠ ವಿಶ್ವನಾಥ ಯಳಮಲಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಜಿಲ್ಲಾಧ್ಯಕ್ಷ ವೀರಯ್ಯ ಎಂ. ಹಿರೇಮಠ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಸ್.ಎನ್. ಬಳ್ಳಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಸೈಯದ ಖಾಲಿದ ಕೊಪ್ಪಳ, ಜಯ ಕರ್ನಾಟಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಚವ್ಹಾಣ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಹನಮಂತ ಅಬ್ಬಿಗೇರಿ, ನಾಸ್ವಿ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಅನ್ವರ ಶಿರಹಟ್ಟಿ, ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಯಚ್ಚರಸ್ವಾಮಿ ನಾಯ್ಕ, ಗದಗ-ಬೆಟಗೇರಿ ಅಂಜುಮನ್ ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಮಹ್ಮದಯುಸೂಫ ನಮಾಜಿ, ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ಅಧ್ಯಕ್ಷ ಎಂ.ಎಸ್. ನಾಗರಕಟ್ಟಿ, ಪೌರಕಾರ್ಮಿಕ ಮಹಾಸಂಘದ ಗದಗ ಜಿಲ್ಲಾಧ್ಯಕ್ಷ ಹೇಮೇಶ ಯಟ್ಟಿ, ಕಳಸಾ-ಬಂಡೂರಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ, ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಕೋಶಾಧ್ಯಕ್ಷ ಅಬ್ದುಲ್ ಕರೀಂ ಬಳಗಾನೂರ, ಕಳಸಾ-ಬಂಡೂರಿ ಹೋರಾಟ ಸಮಿತಿ ಗದಗ ಜಿಲ್ಲಾಧ್ಯಕ್ಷ ವಸಂತ ಪಡಗದ, ಆಟೋ ಚಾಲಕರ ವ ಮಾಲಕರ ಸಂಘದ ಅಧ್ಯಕ್ಷ ವಿಜಯ ಕಲ್ಮನಿ, ಕಪ್ಪತ್ತಗುಡ್ಡ ಹೋರಾಟ ಸಮಿತಿ ಅಧ್ಯಕ್ಷ ಆರ್.ಆರ್. ಅಂಗಡಿ, ರವಿವರ್ಮಾ ಪೇಂಟರ್ ಸಂಘದ ಅಧ್ಯಕ್ಷ ಯೇಸುಜಾನ್ ಶೌರಿ ಸೇರಿ ಅನೇಕರಿಗೆ ಸನ್ಮಾನ ನಡೆಯಲಿದೆ.
ಇದೇ ಸಂದರ್ಭದಲ್ಲಿ ಪಾಸ್ಟರ್ ಫ್ರಾನ್ಸಿಸ್ ಸ್ವಾಮಿನಾಥನ್ ಕನ್ನಯ್ಯ (ಕ್ರೆöÊಸ್ತ ಧರ್ಮ ಗುರುಗಳು), ಪ್ರಿಯಾ ಫ್ರಾನ್ಸಿಸ್ ಕನ್ನಯ್ಯ, ಗಂಗಾಧರ ಎಸ್. ಉಳ್ಳಿಕಾಶಿ, ಸರಸ್ವತಿ ಕೋಂ. ಗಂಗಾಧರ ಉಳ್ಳಿಕಾಶಿ, ಜ್ಯೂಲಿನಾ ಐಜಾಕ್ ಕೆ., ಯಹೆಜ್ಕೆಲ್ ಹೊನ್ನಾಯ್ಕರ, ಕುಮಾರ ಬಿ. ಭಜಂತ್ರಿ, ಬಸವರಾಜ ಗೋಟೂರ ಅವರಿಂದ ದೇಹದಾನ ಹಾಗೂ ನರಸಿಂಹಸ್ವಾಮಿ ಖಾಸಾ, ಶಶಿಕಲಾ ಹೊಂಬಳ ಮತ್ತು ಮೇರಿ ಬೆಟಗೇರಿ ಸೇರಿ ಇತರರಿಂದ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ ಹಾಕಲಿದ್ದಾರೆ ಎಂದು ಭಾರತೀಯರ ಸೇವಾ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಎಲ್.ಆರ್. ಕಿತ್ತೂರ ಅವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.