ಎಚ್.ಕೆ. ಪಾಟೀಲರಿಗೆ ರಾಹುಲ್ ಗಾಂಧಿ ಸಾಂತ್ವನ
ಪ್ರಜಾಪಥ ವಾರ್ತೆ
ಗದಗ: ಸೋಮವಾರ ನಿಧನರಾಗಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿ. ಕೆ.ಎಚ್. ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಕೆ. ಪಾಟೀಲ ಅವರ ನಿಧನ ಸುದ್ದಿ ತಿಳಿದು ಅವರ ಪುತ್ರ, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಮಂಗಳವಾರ ಸಂಜೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ತಾಯಿಯ ಸ್ಥಾನ ಅಮೂಲ್ಯ. ಸಾಮಿಪ್ಯ ಅವಿಸ್ಮರಣೀಯ. ತಾಯಿಯ ಅಗಲುವಿಕೆಯಿಂದ ಆದ ತಮ್ಮ ದುಃಖದಲ್ಲಿ ತಾವು ಭಾಗಿಯಾಗಿರುವುದಾಗಿ ತಿಳಿಸಿ ಬೇಗ ಈ ದುಃಖದಿಂದ ಹೊರಬರಲು ಹಾರೈಸಿದರು.