ಗದಗನ ಕಾರಾಗೃಹದಲ್ಲಿ ಪೋಕ್ಸೊ ಆರೋಪಿ ಆತ್ಮಹತ್ಯೆಗೆ ಶರಣು
ಪ್ರಜಾಪಥ ವಾರ್ತೆ
ಗದಗ: ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಯಾಗಿ ಬಂಧಿಯಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉಪಕಾರಾಗೃಹದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತನು ಗದಗ ತಾಲ್ಲೂಕಿನ ಅಡವಿಸೋಮಾಪೂರ ತಾಂಡಾದ ನಿವಾಸಿ, 19 ವರ್ಷದ ರಾಜು ಲಮಾಣಿ ಎಂದು ತಿಳಿದು ಬಂದಿದೆ.
ಕಳೆದ 20 ದಿನಗಳಿಂದ ವಿಚಾರಣಾಧೀನ ಕೈದಿಯಾಗಿದ್ದ ಮೃತನು ಜಾಮೀನಿಗೂ ಅರ್ಜಿ ಸಲ್ಲಿಸಿದ್ದನು. ತನಗೆ ಜಾಮೀನು ಸಿಗುವುದು ಕಷ್ಟ ಎಂದು ತಿಳಿದು ಸೆಲ್ ನಲ್ಲಿ ಜತೆಗಿದ್ದವರ ಟವೆಲ್ ಸಹಾಯದಿಂದ ಕಿಡಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಮೃತನಿಗೆ ನಿನ್ನೆ ಗುರುವಾರವೇ ಜಾಮೀನು ಮಂಜೂರಾಗಿದೆ ಎಂದು ಹೇಳಲಾಗಿದೆ. ಇದು ಮೃತನಿಗೆ ತಿಳಿದಿಲ್ಲ ಎನ್ನಲಾಗಿದೆ. ಹೀಗಾಗಿ ಆಘಾತಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.